ಪಿಟಿಐ ಫ್ಯಾಕ್ಟ್ ಚೆಕ್ ಚಿತ್ರ
ನವದೆಹಲಿ: ನಟ ಯಶ್ ಇತ್ತೀಚೆಗೆ ಕುಟುಂಬ ಸಮೇತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ ಎನ್ನುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಯಶ್ ಬೀದಿಯೊಂದರಲ್ಲಿ ಪತ್ನಿ ರಾಧಿಕಾ, ಮಗ ಮತ್ತು ಮಗಳೊಂದಿಗೆ ಸಾಗುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ಆದರೆ ಇದು ಸುಳ್ಳು ಸುದ್ದಿ ಎಂದು ಪಿಟಿಐ ನಡೆಸಿದ ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ವಿಡಿಯೊ ಹಳೆಯದಾಗಿದ್ದು, ಯಶ್ ಅವರು 2024ರ ನವೆಂಬರ್‌ನಲ್ಲಿ ಕುಟುಂಬದೊಂದಿಗೆ ಸಮಯ ಕಳೆಯಲು ಮುಂಬೈಗೆ ತೆರಳಿದ್ದಾಗಿನ ವಿಡಿಯೊ ಆಗಿದೆ. ಹಳೆಯ ವಿಡಿಯೊವನ್ನು ತಪ್ಪಾಗಿ ಹಂಚಿಕೊಂಡು ಯಶ್ ಅವರು ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಫೆ.23ರಂದು ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಬಾಲಿವುಡ್, ಸ್ಯಾಂಡಲ್‌ವುಡ್‌ನ ನಟ– ನಟಿಯರು, ಗಣ್ಯರು ಸೇರಿದಂತೆ ದೇಶದಾದ್ಯಂತ ಹಲವು ಖ್ಯಾತ ನಾಮರು ಮಹಾಕುಂಭ ಮೇಳಕ್ಕೆ ತೆರಳಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಕುಂಭಮೇಳ ಫೆ.26ರಂದು ಮುಕ್ತಾಯಗೊಳ್ಳಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹಳೆಯ ವಿಡಿಯೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.