ADVERTISEMENT

ಫ್ಯಾಕ್ಟ್‌ಚೆಕ್‌ | ಕೇಂದ್ರ ಸರ್ಕಾರ ಜೂನ್‌ 15ರಿಂದ ಮತ್ತೆ ಲಾಕ್‌ಡೌನ್‌ ವಿಧಿಸಲ್ಲ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 19:30 IST
Last Updated 11 ಜೂನ್ 2020, 19:30 IST
   

ದೇಶದಲ್ಲಿ ಪ್ರತಿದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜೂನ್‌ 15ರಿಂದ ಮತ್ತೆ ಸಂಪೂರ್ಣ ಲಾಕ್‌ಡೌನ್‌ ವಿಧಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ರೈಲು ಮತ್ತು ವಿಮಾನ ಸಂಚಾರವನ್ನು ಪುನಃ ಸಂಪೂರ್ಣವಾಗಿ ರದ್ದುಪಡಿಸಲಾಗುತ್ತದೆ. ಸೋಂಕು ಹರಡದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿಯನ್ನು ಕೆಲವು ಖಾಸಗಿ ಸುದ್ದಿವಾಹಿನಿಗಳು ಬಿತ್ತರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಈ ಸುದ್ದಿ ತುಂಬಾ ಹರಿದಾಡಿದೆ.

ದೇಶದಲ್ಲಿ ಈಗ ಪ್ರತಿದಿನ ಸರಾಸರಿ ಒಂಬತ್ತು ಸಾವಿರದಷ್ಟು ಪ್ರಕರಣಗಳು ಹೊಸದಾಗಿ ವರದಿಯಾಗುತ್ತಿರುವುದು ನಿಜ. ಆದರೆ, ಸೋಂಕು ತಡೆಗಟ್ಟಲು ಹೊಸದಾಗಿ ಲಾಕ್‌ಡೌನ್‌ ವಿಧಿಸುವಂತಹ ಯಾವುದೇ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಂಡಿಲ್ಲ. ಬದಲು ಲಾಕ್‌ಡೌನ್‌ನ ಎಲ್ಲ ನಿರ್ಬಂಧಗಳನ್ನು ಹಿಂಪಡೆಯಲು ‘ಅನ್‌ಲಾಕ್‌’ ಪ್ರಕ್ರಿಯೆಯನ್ನು ಆರಂಭಿಸಿದೆ. ಮತ್ತೆ ಲಾಕ್‌ಡೌನ್‌ ಘೋಷಣೆ ಸಂಬಂಧ ಹರಿದಾಡಿರುವುದು ಸುಳ್ಳು ಸುದ್ದಿ. ಪಿಐಬಿ ಸಹ ಈ ಸಂದೇಶವನ್ನು ಪರಿಶೀಲಿಸಿದ್ದು, ಸುಳ್ಳು ಮಾಹಿತಿಯಿಂದ ಕೂಡಿದ ಆಧಾರರಹಿತ ಸುದ್ದಿ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT