ADVERTISEMENT

ಜಾರ್ಖಂಡ್‌: ಸೊರೇನ್‌ ಸಂಪುಟಕ್ಕೆ 11 ಮಂದಿ ಸೇರ್ಪಡೆ

ಪಿಟಿಐ
Published 5 ಡಿಸೆಂಬರ್ 2024, 9:37 IST
Last Updated 5 ಡಿಸೆಂಬರ್ 2024, 9:37 IST
<div class="paragraphs"><p>ಜಾರ್ಖಂಡ್‌:&nbsp;ನೂತನ ಸಚಿವರಾಗಿ 11 ಮಂದಿ ಪ್ರಮಾಣ ವಚನ</p></div>

ಜಾರ್ಖಂಡ್‌: ನೂತನ ಸಚಿವರಾಗಿ 11 ಮಂದಿ ಪ್ರಮಾಣ ವಚನ

   

(ಚಿತ್ರ ಕೃಪೆ–@HemantSorenJMM)

ರಾಂಚಿ : ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಗುರುವಾರ ಸಚಿವ ಸಂಪುಟ ವಿಸ್ತರಿಸಿದ್ದು, 11 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ADVERTISEMENT

ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಆರು ಮತ್ತು ಮಿತ್ರ ಪಕ್ಷಗಳಾಗಿರುವ ಕಾಂಗ್ರೆಸ್‌ನ ನಾಲ್ವರು ಮತ್ತು ಆರ್‌ಜೆಡಿ ಪಕ್ಷದ ಒಬ್ಬರು ಸಂಪುಟದಲ್ಲಿ ಸ್ಥಾನಪಡೆದರು. 

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವು ಸ್ಪಷ್ಟ ಬಹುಮತ ಪಡೆದಿತ್ತು. ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರು ನ.28ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಮೈತ್ರಿಕೂಟವು 56 ಸ್ಥಾನಗಳನ್ನು ಪಡೆದಿತ್ತು.

ಸಚಿವರಾದ 11 ಜನರಲ್ಲಿ ಆರು ಮಂದಿ ಹೊಸಬರು. ಉಳಿದಂತೆ  ನಾಲ್ವರು ಎರಡನೇ ಬಾರಿಗೆ ಮತ್ತು ಒಬ್ಬರು ಮೂರನೇ ಬಾರಿಗೆ ಸಚಿವರಾಗಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸಂತೋಷ್ ಕುಮಾರ್ ಗ್ಯಾಂಗ್ವಾರ್ ಅವರು ಪ್ರಮಾಣವಚನ ಬೋಧಿಸಿದರು. 

ಜಾರ್ಖಂಡ್‌ ವಿಧಾನಸಭೆಯ ಅಧಿವೇಶನವು ಡಿಸೆಂಬರ್‌ 9 ರಿಂದ 12ರವರೆಗೂ ನಡೆಯಲಿದೆ. ಜೆಎಂಎಂ ಪಕ್ಷದ ಹಿರಿಯ ಶಾಸಕ ಸ್ಟೀಫನ್ ಮರಂಡಿ ಅವರು ಹಂಗಾಮಿ ಸ್ಪೀಕರ್ ಆಗಿ ಈಗಾಗಲೇ ನೇಮಕಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.