ಕಾರ್ಗಿಲ್‌ನಲ್ಲಿ ಭೂಕಂಪ
(ಚಿತ್ರ ಕೃಪೆ: X/@NCS_Earthquake)
ಕಾರ್ಗಿಲ್: ಲಡಾಖ್‌ನ ಕಾರ್ಗಿಲ್‌ನಲ್ಲಿ ಇಂದು (ಶುಕ್ರವಾರ) ನಸುಕಿನ ವೇಳೆ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಕಾಶ್ಮೀರದಲ್ಲೂ ಕಂಪನದ ಅನುಭವವಾಗಿದೆ.
15 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
ಅರುಣಾಚಲ ಪ್ರದೇಶದಲ್ಲೂ ಇಂದು (ಶುಕ್ರವಾರ) ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪಶ್ಚಿಮ ಕಮೆಂಗ್‌ನಲ್ಲಿ 10 ಕಿ.ಮೀ. ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ.
ಟಿಬೆಟ್‌ನಲ್ಲಿ ಗುರುವಾರ (ಮಾರ್ಚ್ 13) ಒಂದೇ ದಿನದಲ್ಲಿ ಮೂರು ಸಲ ಭೂಮಿ ಕಂಪಿಸಿತ್ತು. ಇದರ ಬೆನ್ನಲ್ಲೇ ಕಾರ್ಗಿನ್‌ನಲ್ಲೂ ಕಂಪನದ ಅನುಭವವುಂಟಾಗಿದೆ.
ಮಾರ್ಚ್ 12ರಂದು ಟಿಬೆಟ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.3, 3.5 ಹಾಗೂ 4.0 ತೀವ್ರತೆಯ ಸರಣಿ ಭೂಕಂಪ ಸಂಭವಿಸಿತ್ತು. ಆದರೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಗುರುವಾರದಂದು ಅಫ್ಗಾನಿಸ್ತಾನದಲ್ಲೂ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿತ್ತು.
'ಟೆಕ್ಟೋನಿಕ್ ಪ್ಲೇಟ್'ಗಳ ಘರ್ಷಣೆಯಿಂದಾಗಿ ಟಿಬೆಟ್ ವಲಯದಲ್ಲಿ ಪದೇ ಪದೇ ಭೂಕಂಪನಗಳು ಸಂಭವಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.