ADVERTISEMENT

ಅಶ್ಲೀಲ ಜಾಹೀರಾತು ಪ್ರಸಾರ ಮಾಡಿದ ಟಿ.ವಿ. ಚಾನಲ್‌ಗಳ ವಿರುದ್ಧ 73 ದೂರು: ಸರ್ಕಾರ

ಪಿಟಿಐ
Published 7 ಡಿಸೆಂಬರ್ 2024, 10:27 IST
Last Updated 7 ಡಿಸೆಂಬರ್ 2024, 10:27 IST
<div class="paragraphs"><p>ಎಲ್. ಮುರುಗನ್</p></div>

ಎಲ್. ಮುರುಗನ್

   

ಪಿಟಿಐ ಚಿತ್ರ

ನವದೆಹಲಿ: ಅಶ್ಲೀಲ ಜಾಹೀರಾತು ಪ್ರಸಾರ ಮಾಡಿದ ಆರೋಪದಡಿ ಖಾಸಗಿ ಟಿ.ವಿ. ಚಾನಲ್‌ಗಳ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ 73 ದೂರುಗಳು ಸಲ್ಲಿಕೆಯಾಗಿವೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ADVERTISEMENT

ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಮಾಹಿತಿ ಹಾಗೂ ಪ್ರಸಾರ ಇಲಾಖೆಯ ರಾಜ್ಯ ಸಚಿವ ಎಲ್‌. ಮುರುಗನ್‌, ‘ಸಲ್ಲಿಕೆಯಾದ ದೂರುಗಳನ್ನು ಮೂರು ಹಂತಗಳ ಪರಿಶೀಲನಾ ವ್ಯವಸ್ಥೆಯ ಮೂಲಕ ವಿಚಾರಣೆ ನಡೆಸಲಾಗಿದೆ’ ಎಂದಿದ್ದಾರೆ.

‘ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್‌ (ತಿದ್ದುಪಡಿ) ಕಾಯ್ದೆಯಡಿ ಸ್ವಯಂ ನಿಯಂತ್ರಣ ಹೊಂದಿರುವ ಪ್ರಸಾರಕರು ಹಾಗೂ ಕೇಂದ್ರ ಸರ್ಕಾರದ ಮೇಲ್ವಿಚಾರಣಾ ವ್ಯವಸ್ಥೆಯ ಮೂಲಕ ಪರಿಶೀಲಿಸಲಾಗಿದೆ. ಇಂಥ ಉಲ್ಲಂಘನೆಗಳು ಕಂಡುಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

‘ಆದರೆ ಒಟಿಟಿ ವೇದಿಕೆಗಳು ಐಟಿ ಕಾಯ್ದೆ 2021ರ ನೀತಿ ಸಂಹಿತೆಯ ಭಾಗ– 3ಕ್ಕೆ ಬದ್ಧರಾಗಿರಬೇಕು. ಕಾನೂನಿನಡಿಯಲ್ಲಿ ನಿಷೇಧಿಸಲಾದ ಯಾವುದೇ ದೃಶ್ಯ ಅಥವಾ ವಿಷಯವನ್ನು ಪ್ರಸಾರ ಮಾಡಬಾರದು. ಆ ಮೂಲಕ ಮಕ್ಕಳಿಗೆ ಸೂಕ್ತವಲ್ಲದ ವಿಷಯಗಳನ್ನು ಪ್ರಸಾರವಾಗದಂತೆ ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು’ ಎಂದು ಮುರುಗನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.