ADVERTISEMENT

ರಾಮ ಮಂದಿರ ಟ್ರಸ್ಟ್: ಆರ್‌ಎಸ್ಎಸ್ ಮುಖ್ಯಸ್ಥರಿಗೆ ದಾಖಲೆ ಹಸ್ತಾಂತರ; ಸಂಜಯ್ ಸಿಂಗ್

ಪಿಟಿಐ
Published 27 ಜೂನ್ 2021, 4:43 IST
Last Updated 27 ಜೂನ್ 2021, 4:43 IST
ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್
ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್   

ನವದೆಹಲಿ: ರಾಮ ಮಂದಿರ ನಿರ್ಮಾಣ ಕುರಿತ ಟ್ರಸ್ಟ್ ಹೆಸರಿನಲ್ಲಿ ವಂಚನೆ ಎಸಗಲಾಗಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದು, ಶೀಘ್ರವೇ ದಾಖಲೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಭಾಗವತ್ ಅವರನ್ನು ಭೇಟಿಯಾಗಲು ಸಂಜಯ್ ಸಿಂಗ್ ಸಮಯಾವಕಾಶ ಕೋರಿದ್ದು, ಮಂದಿರ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದ್ದು, ಅದಕ್ಕೆ ಸಂಬಂಧಪಟ್ಟ ಎಲ್ಲ ಸಾಕ್ಷ್ಯಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿ ₹2 ಕೋಟಿ ಬೆಲೆಬಾಳುವ ಭೂಮಿಯನ್ನು ₹18.5 ಕೋಟಿ ತೆತ್ತು ಖರೀದಿಸಲಾಗಿದೆ ಎಂದು ಸಂಜಯ್ ಸಿಂಗ್ ಮತ್ತು ಅಯೋಧ್ಯೆಯಎಸ್‌ಪಿಯ ಮಾಜಿ ಶಾಸಕ ಪವನ್ ಪಾಂಡೆ ಆರೋಪಿಸಿದ್ದರು.

ADVERTISEMENT

ಈ ಆರೋಪಗಳ ಕುರಿತು ದಾಖಲೆ ನೀಡುವುದಾಗಿ ಸಂಜಯ್ ಸಿಂಗ್ ಹೇಳಿದ್ದು, ವಂಚನೆ ಎಸಗಿರುವ ಕುರಿತು ಮತ್ತು ಬಿಜೆಪಿ ಭ್ರಷ್ಟಾಚಾರ ಬಗ್ಗೆ ಎಲ್ಲ ಸೂಕ್ತ ದಾಖಲೆಗಳಿವೆ. ಅವುಗಳನ್ನು ಆರ್‌ಎಸ್ಎಸ್ ಮುಖ್ಯಸ್ಥರು ಗಮನಿಸಿ, ಉತ್ತರಿಸಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.