ADVERTISEMENT

ಅಭಿನಂದನ್‌ ಹೆತ್ತವರಿಗೆ ಅಪ್ರತಿಮ ಗೌರವ

ಪಿಟಿಐ
Published 1 ಮಾರ್ಚ್ 2019, 20:27 IST
Last Updated 1 ಮಾರ್ಚ್ 2019, 20:27 IST
ವಿಂಗ್ ಕಮಾಂಡರ್ ಅಭಿನಂದನ್ ಅವರ ತಂದೆ ಮತ್ತು ತಾಯಿ
ವಿಂಗ್ ಕಮಾಂಡರ್ ಅಭಿನಂದನ್ ಅವರ ತಂದೆ ಮತ್ತು ತಾಯಿ   

ನವದೆಹಲಿ:ಗುರುವಾರ ತಡರಾತ್ರಿ ಚೆನ್ನೈನಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನದಲ್ಲಿ ‘ನಾವು ಮೊದಲು ಇಳಿಯಬೇಕು’ ಎಂಬ ಆತುರವಿರಲಿಲ್ಲ. ಆ ವಿಮಾನದಲ್ಲಿದ್ದ ಆ ಹಿರಿಯ ದಂಪತಿಯನ್ನು ಹೊರತುಪಡಿಸಿ ಉಳಿದ ಪ್ರಯಾಣಿಕರೆಲ್ಲರೂ ಎದ್ದುನಿಂತಿದ್ದರು.

ತಮ್ಮ ಜೀವನದ ಅತ್ಯಂತ ಅಮೂಲ್ಯವಾದ ಕ್ಷಣಕ್ಕಾಗಿ ಆ ಹಿರಿಯ ಜೋಡಿ ಚೆನ್ನೈನಿಂದ ದೆಹಲಿಗೆ ಬಂದಿತ್ತು. ವಿಶೇಷವೆಂದರೆ ಆ ಅಮೂಲ್ಯ ಕ್ಷಣಕ್ಕಾಗಿ ದೇಶವೂ ಕಾಯುತ್ತಿತ್ತು. ಆ ಜೋಡಿ ಅಲ್ಲಿಂದ ಅಮೃತಸರಕ್ಕೆ ತುರ್ತಾಗಿ ತೆರಳಬೇಕಿತ್ತು. ಹೀಗಾಗಿ ವಿಮಾನದಿಂದ ಆ ಹಿರಿಯರು ಮೊದಲು ಇಳಿದು ಹೋಗಲು ಪ್ರಯಾಣಿಕರೆಲ್ಲರೂ ಅವಕಾಶ ಮಾಡಿಕೊಟ್ಟರು.

ಆ ಜೋಡಿ ವಿಮಾನದಿಂದ ಹೊರಡುವಾಗ ಉಳಿದ ಪ್ರಯಾಣಿಕರೆಲ್ಲರೂ ಎದ್ದುನಿಂತು ಗೌರವ ಸಲ್ಲಿಸಿದರು. ಅದರ ಜತೆಯಲ್ಲೇ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು. ಸಹ ಪ್ರಯಾಣಿಕರ ಅಭಿನಂದನೆಗೆ ಕೈಮುಗಿಯುವ ಮೂಲಕ ಆ ದಂಪತಿ ವಂದನೆ ಸಲ್ಲಿಸಿದರು. ಬಹುತೇಕ ಪ್ರಯಾಣಿಕರು ಈ ದೃಶ್ಯಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿಕೊಂಡರು.

ಆ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ಆ ಹಿರಿಯ ದಂಪತಿ ಮತ್ತು ಅವರಿಗೆ ಗೌರವ ಸಲ್ಲಿಸಿದ ಪ್ರಯಾಣಿಕರ ಬಗ್ಗೆ ನೆಟ್ಟಿಗರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ಒಂದು ಗೌರವಕ್ಕೆ ಪಾತ್ರವಾಗಿದ್ದು ವಿಂಗ್ ಕಮಾಂಡರ್ ಅಭಿನಂದನ್ ಅವರ ತಂದೆ ಮತ್ತು ತಾಯಿ. ತಮ್ಮ ಮಗ ಅಭಿನಂದನ್ ಅವರ ಹಸ್ತಾಂತರ ಪ್ರಕ್ರಿಯೆ ನಡೆಯಲಿದ್ದ ಅಟ್ಟಾರಿ–ವಾಘಾ ಗಡಿಗೆ ತೆರಳಲು ನಿವೃತ್ತ ಏರ್‌ ಮಾರ್ಷಲ್ ಸಿಂಹಕುಟ್ಟಿ ವರ್ಧಮಾನ್ ಮತ್ತು ಅವರ ಪತ್ನಿ ಡಾ.ಶೋಭಾ ವರ್ಧಮಾನ್ ಅವರು ದೆಹಲಿಗೆ ಬಂದಿಳಿದಿದ್ದರು. ಈ ದಂಪತಿಯ ಇರುವಿಕೆಯನ್ನು ಅರಿತ ಪ್ರಯಾಣಿಕರು, ಅವರಿಗೆ ಗೌರವ ಸಲ್ಲಿಸಿದ ಬಗೆ ಇದು.

ಇವನ್ನೂ ಓದಿ...

* ಇವನ್ನೂ ಓದಿ...

*ವಿಂಗ್ ಕಮಾಂಡರ್ ಅಭಿನಂದನ್‌ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ...
*ಸೇನೆಯ ಬಗ್ಗೆ ಗೌರವವಿದ್ದರೆ ಫೇಸ್‌ಬುಕ್‌ನಲ್ಲಿ ಈ 10 ನಿಯಮಗಳನ್ನು ಪಾಲಿಸಿ
*ಧೀರರ ಕುಟುಂಬ: ವಿಂಗ್ ಕಮಾಂಡರ್ ಅಭಿನಂದನ್ ಅವರ ಮೂರು ತಲೆಮಾರು ದೇಶಕ್ಕಾಗಿ ದುಡಿದಿದೆ
*ವಿಮಾನದಲ್ಲಿ ಅಭಿನಂದನ್‍ ಕುಟುಂಬಕ್ಕೆ ಎದ್ದು ನಿಂತು ಗೌರವ ಸೂಚಿಸಿದ ಪ್ರಯಾಣಿಕರು
*ಪಾಕ್‌ ಪ್ರಯಾಣಿಕರಿಗೆ ಆಹಾರ ವಿತರಿಸಿದ ಭಾರತದ ಪೊಲೀಸರು
*ಅಭಿನಂದನ್ ಕರೆತರಲು ವಿಮಾನ ಕಳಿಸಬೇಡಿ ಎಂದ ಪಾಕ್
*ವಿಂಗ್ ಕಮಾಂಡರ್ ಅಭಿನಂದನ್‌ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಸಿದ್ಧತೆ
*ಅಭಿನಂದನ್‌ ಕರೆತನ್ನಿ: ಕಾಳಜಿಯ ಕರೆ
*ಪಾಕಿಸ್ತಾನದ ವಶದಲ್ಲಿ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌? ವಿಡಿಯೊ ಬಿಡುಗಡೆ
*ಭಾರತ ವಾಯುಪಡೆ ಉರುಳಿಸಿದ ಪಾಕ್ ಯುದ್ಧವಿಮಾನದ ಮೊದಲ ಚಿತ್ರ ಬಹಿರಂಗ
*ಯಡಿಯೂರಪ್ಪ ಹೇಳಿಕೆಯನ್ನು ರಿಟ್ವೀಟ್ ಮಾಡಿ ವ್ಯಂಗ್ಯವಾಡಿದಪಾಕ್‌ ಪ್ರಧಾನಿಯ ಪಕ್ಷ​
*ಪೈಲಟ್‌ ಅಭಿನಂದನ್‌ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್‌ಗೆ ಐಟಿ ಸಚಿವಾಲಯ ಆಗ್ರಹ​
*ವಾಯುದಾಳಿಯು ಕರ್ನಾಟಕದಲ್ಲಿ 22 ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ: ಯಡಿಯೂರಪ್ಪ​
*ನೀವು ನಿದ್ರೆ ಮಾಡ್ತೀರೋ ಇಲ್ವೋ; ಅಭಿನಂದನ್ ಅವರನ್ನು ಕರೆತನ್ನಿ: ನಟಿ ರಮ್ಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.