ADVERTISEMENT

ಕೇರಳ ಹೈಕೋರ್ಟ್‌: ವಿಚಾರಣೆ ವರ್ಗಾವಣೆ; ನಟಿಯ ಅರ್ಜಿ ವಜಾ

ನಟ ದಿಲೀಪ್‌ ಆರೋಪಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ

ಪಿಟಿಐ
Published 20 ನವೆಂಬರ್ 2020, 14:06 IST
Last Updated 20 ನವೆಂಬರ್ 2020, 14:06 IST
ದಿಲೀಪ್‌
ದಿಲೀಪ್‌   

ಕೊಚ್ಚಿ: ಮಲಯಾಳಂ ನಟ ದಿಲೀಪ್‌ ಆರೋಪಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಯನ್ನು ವರ್ಗಾಯಿಸುವಂತೆ ಕೋರಿ, ದೌರ್ಜನ್ಯದ ದೂರು ದಾಖಲಿಸಿರುವ ನಟಿ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಗಳನ್ನು ಕೇರಳ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

‘ನ್ಯಾಯಾಲಯ ಹಾಗೂ ಅಭಿಯೋಜಕರು ಹೊಂದಿಕೊಳ್ಳುವ ರೀತಿಯಲ್ಲಿ ಕಾರ್ಯನಿರ್ವಹಿಸಿದೇ ಇದ್ದರೆ, ಕಾನೂನಿನ ಕೈಯಿಂದ ಅಪರಾಧಿಗಳು ತಪ್ಪಿಸಿಕೊಂಡು, ನಿರಪರಾಧಿಗಳು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು ಅರ್ಜಿಗಳನ್ನು ತಿರಸ್ಕರಿಸಿತು. ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಾಗುವಂತೆ ವಿಚಾರಣೆಯ ತೀರ್ಪಿಗೆ ವಾರದ ತಡೆ ನೀಡಬೇಕು ಎಂದು ಕೋರಿ ನಟಿ ಹಾಗೂ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್‌ ತಿರಸ್ಕರಿಸಿತು.

ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನವೆಂಬರ್‌ ಆರಂಭದಲ್ಲಿ ತಿರಸ್ಕರಿಸಿದ್ದ ಹೈಕೋರ್ಟ್‌, ವಿಚಾರಣೆಯನ್ನು ಮುಂದುವರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ವಿಚಾರಣಾ ನ್ಯಾಯಾಲಯದ ಪಕ್ಷಪಾತ ಹಾಗೂ ಹಗೆಯ ನಡವಳಿಕೆಯಿಂದ ನನಗೆ ನೋವಾಗಿದೆ. ದಿಲೀಪ್‌ ಪರ ವಕೀಲರು ನನಗೆ ಕಿರುಕುಳ ನೀಡುವಾಗ ವಿಚಾರಣಾ ನ್ಯಾಯಾಲಯವು ಮೂಕ ಪ್ರೇಕ್ಷಕರಂತೆ ಕುಳಿತಿತ್ತು. ಕೋರ್ಟ್‌ ಹಾಲ್‌ನ ಒಳಗೆ ಆರೋಪಿಯ ಪರ ವಕೀಲರ ಸಂಖ್ಯೆಯನ್ನು ನಿರ್ಬಂಧಿಸಲು ವಿಚಾರಣಾ ನ್ಯಾಯಾಲಯವು ವಿಫಲವಾಗಿತ್ತು’ ಎಂದು ನಟಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ನಟಿಯ ಈ ಆರೋಪವನ್ನೇ ಉಲ್ಲೇಖಿಸಿ, ಬೇರೆ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಯನ್ನು ವರ್ಗಾವಣೆಗೊಳಿಸುವಂತೆ ಸರ್ಕಾರ ಕೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.