ADVERTISEMENT

Ahmedabad Plane Crash: ಸಹ ಪೈಲಟ್ ಕ್ಲೈವ್ ಕುಂದರ್ ಮೃತದೇಹ ಸ್ವಗೃಹಕ್ಕೆ

ಪಿಟಿಐ
Published 19 ಜೂನ್ 2025, 6:02 IST
Last Updated 19 ಜೂನ್ 2025, 6:02 IST
<div class="paragraphs"><p>ಸಹ ಪೈಲಟ್&nbsp;ಕ್ಲೈವ್ ಕುಂದರ್ ಮೃತದೇಹ ಸ್ವಗೃಹಕ್ಕೆ</p></div>

ಸಹ ಪೈಲಟ್ ಕ್ಲೈವ್ ಕುಂದರ್ ಮೃತದೇಹ ಸ್ವಗೃಹಕ್ಕೆ

   

ಮುಂಬೈ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ಪತನದ ದುರಂತದಲ್ಲಿ ಮೃತಪಟ್ಟ ಸಹ ಪೈಲಟ್‌ ಕ್ಲೈವ್ ಕುಂದರ್ ಅವರ ಮೃತದೇಹವನ್ನು ಮುಂಬೈನಲ್ಲಿನ ಸ್ವಗೃಹಕ್ಕೆ ಗುರುವಾರ ತರಲಾಗಿದೆ.

ಕುಂದರ್‌ ಅವರು ಮುಂಬೈನ ಗುರ್‌ಗಾಂವ್‌ನಲ್ಲಿ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದರು.

ADVERTISEMENT

ಗುರುವಾರ ಮಧ್ಯಾಹ್ನ 1 ಗಂಟೆಯವರೆಗೆ ಮೃತದೇಹವನ್ನು ದರ್ಶನಕ್ಕೆ ಇರಿಸಲಾಗಿದ್ದು, ಬಳಿಕ ಸೆವ್ರಿ ಕ್ರಿಶ್ಚಿಯನ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಜೂನ್‌ 12 ರಂದು 242 ಪ್ರಯಾಣಿಕರನ್ನು ಹೊತ್ತ ಏರ್‌ ಇಂಡಿಯಾ ಎಐ –171 ವಿಮಾನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿತ್ತು. ಆದರೆ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ ಮೇಲೆ ವಿಮಾನ ಪತನವಾಗಿ ಒಬ್ಬ ಪ್ರಯಾಣಿಕನ ಹೊರತಾಗಿ ಪೈಲಟ್‌ ಸೇರಿ ಎಲ್ಲರೂ ಮೃತಪಟ್ಟಿದ್ದರು. ಈ ವಿಮಾನದಲ್ಲಿ ಕುಂದರ್ ಸಹ ಪೈಲಟ್‌ ಆಗಿದ್ದರು. ಇವರು 1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.