ADVERTISEMENT

ಶೌಚಾಲಯ ಹುಡುಕಿ ಕಾಕ್‌ಪಿಟ್ ಬಳಿ ತೆರಳಿದ ಪ್ರಯಾಣಿಕ: Air India ವಿಮಾನದಲ್ಲಿ ಘಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2025, 12:23 IST
Last Updated 22 ಸೆಪ್ಟೆಂಬರ್ 2025, 12:23 IST
<div class="paragraphs"><p>ಏರ್ ಇಂಡಿಯಾ ವಿಮಾನ</p></div>

ಏರ್ ಇಂಡಿಯಾ ವಿಮಾನ

   

ಬೆಂಗಳೂರು: ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಧ್ಯೆ ಭದ್ರತಾ ಭೀತಿ ಎದುರಾದ ಘಟನೆ ಇಂದು (ಸೆಪ್ಟೆಂಬರ್ 22) ನಡೆದಿದೆ. ಪ್ರಯಾಣಿಕರೊಬ್ಬರು ಶೌಚಾಲಯ ಹುಡುಕಿಕೊಂಡು ಕಾಕ್‌ಪಿಟ್‌ ಬಳಿ ತೆರಳಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ –2ರಿಂದ ಬೆಳಿಗ್ಗೆ 8 ಗಂಟೆಗೆ ಟೇಕಾಫ್ ಆದ ‘IX 1086’ ವಿಮಾನವು 10.27ಕ್ಕೆ ವಾರಾಣಸಿಯಲ್ಲಿ ಲ್ಯಾಂಡ್ ಆಗಿತ್ತು. ಪ್ರಯಾಣ ಮಧ್ಯೆ ಪ್ರಯಾಣಿಕ ಶೌಚಾಲಯವನ್ನು ಹುಡುಕಿಕೊಂಡು ಕಾಕ್‌ಪಿಟ್ ಬಳಿ ತೆರಳಿದ್ದಾರೆ. ಆದರೆ ಅಪಹರಣದ ಪ್ರಯತ್ನವಾಗಿರಬಹುದೆಂದು ಶಂಕಿಸಿ ಪೈಲಟ್ ಬಾಗಿಲು ತೆರೆಯಲಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಘಟನೆ ನಡೆದಿರುವ ಬಗ್ಗೆ ಏರ್‌ಲೈನ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಖಚಿತ ಪಡಿಸಿದ್ದು, ಸುರಕ್ಷತೆ ಬಗ್ಗೆ ಯಾವುದೇ ರಾಜಿ ಇಲ್ಲ ಎಂದು ಹೇಳಿದೆ. ಈ ಬಗ್ಗೆ ಲ್ಯಾಂಡ್ ಆದ ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಏರ್ ಇಂಡಿಯಾ ವಕ್ತಾರ ತಿಳಿಸಿದ್ದಾರೆ.

ಇದು ಪ್ರಮಾದವಾಶತ್ ಅದ ಘಟನೆಯೇ ಅಥವಾ ಭದ್ರತಾ ಉಲ್ಲಂಘನೆ ಯತ್ನವೇ ಎನ್ನುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.