ADVERTISEMENT

SIR ಒತ್ತಡದಿಂದ ಮೃತಪಟ್ಟವರ ಕುಟುಂಬಗಳಿಗೆ EC ₹1 ಕೋಟಿ ಪರಿಹಾರ ನೀಡಲಿ: ಅಖಿಲೇಶ್

ಪಿಟಿಐ
Published 26 ನವೆಂಬರ್ 2025, 14:33 IST
Last Updated 26 ನವೆಂಬರ್ 2025, 14:33 IST
<div class="paragraphs"><p>ಅಖಿಲೇಶ್ ಯಾದವ್</p></div>

ಅಖಿಲೇಶ್ ಯಾದವ್

   

- ಪಿಟಿಐ ಚಿತ್ರ

ಲಖನೌ: ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಒತ್ತಡಕ್ಕೆ ಸಿಲುಕಿ, ಭಯದಿಂದ ಪ್ರಾಣ ಕಳೆದುಕೊಂಡಿರುವವರ ಕುಟುಂಬಗಳಿಗೆ ಆಯೋಗ ₹1ಕೋಟಿ ಪರಿಹಾರ ನೀಡಲಿ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ADVERTISEMENT

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ಎಸ್‌ಐಆರ್‌ ಪ್ರಕ್ರಿಯೆಯಿಂದಾಗಿ ಅನೇಕರು ತೀವ್ರ ಒತ್ತಡವನ್ನು  ಅನುಭವಿಸಿದ್ದಾರೆ. ಇದರಿಂದ ಹಲವರು ಕೆಟ್ಟ ನಿರ್ಧಾರಗಳನ್ನೂ ತೆಗೆದುಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಈ ರೀತಿ ಮೃತಪಟ್ಟವರ ಕುಟುಂಬಗಳಿಗೆ ನಮ್ಮ ಪಕ್ಷ ₹2 ಲಕ್ಷ ಸಹಾಯಧನ ನೀಡಲಿದೆ. ಚುನಾವಣಾ ಆಯೋಗ ₹1 ಕೋಟಿ ಪರಿಹಾರ ನೀಡಬೇಕು. ಇದು ಆಯೋಗಕ್ಕೆ ನೇರವಾದ ಮೇಲ್ಮನವಿಯಾಗಿದೆ’ ಎಂದಿದ್ದಾರೆ.

ಎಸ್‌ಐಆರ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸುಧೀರ್‌ ಎನ್ನುವವರು, ತಮ್ಮ ಮದುವೆಯ ಹಿಂದಿನ ದಿನ ಫತೇಪುರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದ ಸುದ್ದಿಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಸುಧೀರ್‌ ಅವರನ್ನು ಜಹಾನಾಬಾದ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್‌ಐಆರ್‌ ಪ್ರಕ್ರಿಯೆಯ ಮೇಲ್ವಿಚಾರಕರಾಗಿ ನೇಮಿಸಲಾಗಿತ್ತು. ಮೇಲಧಿಕಾರಿಗಳು ಸುಧೀರ್‌ ಅವರ ಮೇಲೆ ಅತಿಯಾದ ಕೆಲಸದ ಒತ್ತಡ ಹೇರಿದ್ದರು. ಇದರಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.