ಅಮಿತ್ ಶಾ ಹಾಗೂ ಮಮತಾ ಬ್ಯಾನರ್ಜಿ
– ಎ.ಐ ಚಿತ್ರ
ಕೋಲ್ಕತ್ತ: 2026ರವರೆಗೆ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಮಮತಾ ಬ್ಯಾನರ್ಜಿಯವರು ವಿರೋಧಿಸಬಹುದು, ಆ ಬಳಿಕ ಅವರು ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೋಲ್ಕತ್ತದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ವಕ್ಫ್ ಕಾಯ್ದೆಯಲ್ಲಿ ಏನಾದರೂ ಸಮಸ್ಯೆ ಇದೆಯೇ? ವಕ್ಫ್ ಕಾರಣದಿಂದಾಗಿ ಬಂಗಾಳದ ಭೂಮಿಯನ್ನು ತ್ಯಾಗ ಮಾಡಬೇಕೇ ಎಂದು ಪ್ರಶ್ನಿಸಿದ್ದಾರೆ.
ವಕ್ಫ್ ಕಾಯ್ದೆಯನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ಯಾರ ಪರವಾಗಿ ನಿಲ್ಲುತ್ತಿದ್ದಾರೆ ಎಂದು ಕೇಳಿದ್ದಾರೆ.
‘ಮುರ್ಶಿದಾಬಾದ್‌ನಲ್ಲಿ ಗಲಭೆ ನಡೆಯಿತು. ಬಿಎಸ್‌ಎಫ್‌ನ್ನು ಕರೆಸಿಕೊಳ್ಳಿ ಎಂದು ನಾವು ಒತ್ತಾಯ ಮಾಡಿದೆವು. ಆದರೆ ಅವರು ಅದನ್ನು ಮಾಡಲಿಲ್ಲ. ನಮ್ಮ ಕಾರ್ಯಕರ್ತರು ಹೈಕೋರ್ಟ್‌ಗೆ ಹೋದರು. ಹೈಕೋರ್ಟ್ ಆದೇಶದ ಬಳಿಕ ಹಿಂದೂಗಳನ್ನು ರಕ್ಷಣೆ ಮಾಡಲು ಬಿಎಸ್‌ಎಫ್ ಬಂತು’ ಎಂದು ಅವರು ಹೇಳಿದ್ದಾರೆ.
‘ಮಮತಾ ಬ್ಯಾನರ್ಜಿ ಸಂಪುಟದ ಸದಸ್ಯರೊಬ್ಬರು ಬಿಎಸ್‌ಎಫ್ ಅನ್ನು ನಿಂದಿಸಿದರು. ಟಿಎಂಸಿಯ ನಾಯಕರು ಮುಂದೆ ನಿಂತು ಲಗಭೆಕೋರರನ್ನು ಬೆಂಬಲಿಸಿದರು. ಬಂಗಾಳ ಸರ್ಕಾರದ ಸಚಿವರೇ ಈ ಗಲಭೆಯಲ್ಲಿ ಭಾಗಿಯಾಗಿದ್ದಾರೆ. ಇದು ಸರ್ಕಾರಿ ಪ್ರಾಯೋಜಿತ ಹಿಂಸಾಚಾರವಾಗಿದ್ದು, ಹಿಂದೂಗಳಿಗೆ ಅನ್ಯಾಯವಾಗಿದೆ. ಮುಸ್ಲಿಮರನ್ನು ಓಲೈಕೆ ಮಾಡಲು ಮಮತಾ ದೀದಿ ಎಲ್ಲಾ ಗೆರೆಯನ್ನೂ ದಾಟಿದರು’ ಎಂದು ಅಮಿತ್ ಶಾ ಟೀಕಾ ಪ್ರಹಾರ ನಡೆಸಿದ್ದಾರೆ.
ಮುಸ್ಲಿಮರನ್ನು ಓಲೈಸಲು ಮಮತಾ ಬ್ಯಾನರ್ಜಿ ಆಪರೇಷನ್ ಸಿಂಧೂರವನ್ನು ಟೀಕಿಸುತ್ತಾರೆ ಎಂದು ಇದೇ ವೇಳೆ ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.