ADVERTISEMENT

ಕಾಂಗ್ರೆಸ್‌–ಐಎಸ್‌ಎಫ್ ಒಪ್ಪಂದ ಕುರಿತು ಶರ್ಮಾ ಟೀಕೆ, ಅಧೀರ್ ಚೌಧರಿ ಆಕ್ಷೇಪ

ಪಿಟಿಐ
Published 2 ಮಾರ್ಚ್ 2021, 11:34 IST
Last Updated 2 ಮಾರ್ಚ್ 2021, 11:34 IST
ಅಧೀರ್‌ ರಂಜನ್ ಚೌಧರಿ(ಎಡ ಚಿತ್ರ)
ಅಧೀರ್‌ ರಂಜನ್ ಚೌಧರಿ(ಎಡ ಚಿತ್ರ)   

ಕೋಲ್ಕತ್ತ: ಮುಂಬರುವ ವಿಧಾನಸಭಾ ಚುನಾವಣೆಯ ಸಂಬಂಧ ಪಶ್ಚಿಮ ಬಂಗಾಳದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್‌ (ಐಎಸ್‌ಎಫ್‌) ನೊಂದಿಗೆ ಕಾಂಗ್ರೆಸ್‌ ಕೈಜೋಡಿಸಿರುವ ಕುರಿತು ಕಾಂಗ್ರೆಸ್‌ ನಾಯಕ ಆನಂದ ಶರ್ಮಾ ಮಾಡಿದ್ದ ಟೀಕೆಗೆ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್‌ ರಂಜನ್ ಚೌಧರಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

‘ಆನಂದ್‌ ಶರ್ಮಾ ಅವರು ಬಿಜೆಪಿಯ ಕಾರ್ಯಸೂಚಿಗೆ ಅನುಗುಣವಾಗಿ ಪ್ರತಿಕ್ರಿಯಿಸುವ ಮೂಲಕ ನಮ್ಮ ಪಕ್ಷದ ಹಿತಾಸಕ್ತಿಯನ್ನೇ ಕಡೆಗಣಿಸುತ್ತಿದ್ದಾರೆ‘ ಎಂದು ಚೌಧರಿ ಆರೋಪಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಮೌಲ್ವಿ ಅಬ್ಬಾಸ್‌ ಸಿದ್ದಕಿ ನೇತೃತ್ವದ ಐಎಸ್‌ಎಫ್‌ನೊಂದಿಗೆ ಕಾಂಗ್ರೆಸ್ ಮಾಡಿಕೊಂಡಿರುವ ಒಪ್ಪಂದ, ‘ಗಾಂಧಿ ಮತ್ತು ನೆಹರೂ ಅವರ ಜಾತ್ಯತೀತ ಸಿದ್ಧಾಂತ‘ಕ್ಕೆ ವಿರುದ್ಧವಾಗಿದೆ. ಕೋಮುವಾದಿ ಪಕ್ಷಗಳ ವಿರುದ್ಧ ಹೋರಾಡುವುದಕ್ಕೆ ಇಂಥ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ‘ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

ಈ ವಿಷಯಕ್ಕೆ ಸಂಬಂಧಿಸಿದಂತೆ ಚೌಧರಿ ಮತ್ತು ಶರ್ಮಾ ಅವರು ಪರಸ್ಪರ ಟ್ವೀಟ್‌ ಮೂಲಕ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಈ ಕುರಿತು ಕೂಲಂಕಷವಾಗಿ ಪರಿಶೀಲಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆಶರ್ಮಾ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.