ADVERTISEMENT

ಆಂಧ್ರ: ಗುಂಟೂರು ಜಿಲ್ಲೆಯಲ್ಲಿ ‘ಮೆಲಿಯೊಯಿಡೊಸಿಸ್’ ದೃಢ; ಈವರೆಗೂ 23 ಮಂದಿ ಸಾವು

ಪಿಟಿಐ
Published 9 ಸೆಪ್ಟೆಂಬರ್ 2025, 15:44 IST
Last Updated 9 ಸೆಪ್ಟೆಂಬರ್ 2025, 15:44 IST
<div class="paragraphs"><p>ಮೆಲಿಯೊಯಿಡೊಸಿಸ್</p></div>

ಮೆಲಿಯೊಯಿಡೊಸಿಸ್

   

ಹೈದರಾಬಾದ್: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತುರಕಪಲೆಂ ಗ್ರಾಮದ ರೋಗಿಯೊಬ್ಬರಲ್ಲಿ ‘ಮೆಲಿಯೊಯಿಡೊಸಿಸ್’ (ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು) ಇರುವುದು ದೃಢಪಟ್ಟಿದೆ.

1,200 ಜನರು ವಾಸಿಸುತ್ತಿರುವ ಈ ಪುಟ್ಟ ಗ್ರಾಮದಲ್ಲಿ ಜುಲೈನಿಂದ ಇದುವರೆಗೆ ನಿಗೂಢ ಆರೋಗ್ಯ ಸಮಸ್ಯೆಗಳಿಂದಾಗಿ 23 ಮಂದಿ ಮೃತಪಟ್ಟಿದ್ದರು. ಸರಣಿ ಸಾವುಗಳ ನಡುವೆಯೇ ಬ್ಯಾಕ್ಟೀರಿಯಾ ಸೋಂಕಿನ ಮೊದಲ ಪ್ರಕರಣ ದೃಢಪಟ್ಟಿದೆ.

ADVERTISEMENT

ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 46 ವರ್ಷದ ರೋಗಿಯಲ್ಲಿ ‘ಮೆಲಿಯೊಯಿಡೊಸಿಸ್’ ಸೋಂಕು ಇರುವುದು ದೃಢಪಟ್ಟಿದೆ ಎಂದು ಗುಂಟೂರು ಜಿಲ್ಲಾಧಿಕಾರಿ ಎಸ್‌.ನಾಗಲಕ್ಷ್ಮಿ ಮಂಗಳವಾರ ಹೇಳಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಯಾವುದೇ ತಕ್ಷಣದ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಗ್ರಾಮದಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ತಲಾ 10 ಮಂದಿ ಹಾಗೂ ಸೆಪ್ಟೆಂಬರ್‌ನಲ್ಲಿ ಮೂವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರಲ್ಲಿ ಆರಂಭದಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದು, ಬಳಿಕ ಅಂಗಾಂಗ ವೈಫಲ್ಯಗೊಂಡು ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದಾರೆ. ಮೃತರಲ್ಲಿ ಬಹುತೇಕರು 55 ವರ್ಷದವರಾಗಿದ್ದರು.

ಆರೋಗ್ಯ ಅಧಿಕಾರಿಗಳು ಆರಂಭದಲ್ಲಿ ‘ಬುರ್ಖೊಡೇರಿಯ ಸುಡೊಮೇಲಿಯ’ ಬ್ಯಾಕ್ಟೀರಿಯಾದಿಂದ ಉಂಟಾಗುವ ‘ಮೆಲಿಯೊಯಿಡೊಸಿಸ್’ ಸೋಂಕು ಆಗಿರಬಹುದು ಎಂದು ಶಂಕಿಸಿದ್ದರು. ಸೆಪ್ಟೆಂಬರ್‌ 3ರಂದು ಗ್ರಾಮದಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಿಸಿ, ನಿಗೂಢ ಸಾವಿನ ಕಾರಣ ಪತ್ತೆಗೆ ಸಮಗ್ರ ತನಿಖೆ ಆರಂಭಿಸಿದ್ದರು. ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.