ADVERTISEMENT

ಪಂಚ ರಾಜ್ಯಗಳ ಚುನಾವಣೆ 2022: ದಿನಾಂಕ, ಸಂಪೂರ್ಣ ವಿವರ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2022, 14:05 IST
Last Updated 8 ಜನವರಿ 2022, 14:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು ಶನಿವಾರ ಪ್ರಕಟಿಸಿದೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನೇರವೇರಲಿದೆ.

ಉತ್ತರ ಪ್ರದೇಶ:
ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್ 7ರ ವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ಮೊದಲ ಹಂತ: ಫೆ. 10
2ನೇ ಹಂತ: ಫೆ. 14
3ನೇ ಹಂತ: ಫೆ. 20
4ನೇ ಹಂತ: ಫೆ. 23
5ನೇ ಹಂತ: ಫೆ. 27
6ನೇ ಹಂತ: ಮಾ. 03
7ನೇ ಹಂತ: ಮಾ. 07

ADVERTISEMENT

ಇದನ್ನೂ ಓದಿ:

ಮಣಿಪುರ:
ಮಣಿಪುರದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತ: ಫೆ. 27
2ನೇ ಹಂತ: ಮಾರ್ಚ್ 03

ಉತ್ತರಾಖಂಡ, ಗೋವಾ, ಪಂಜಾಬ್:
ಉತ್ತರಾಖಂಡ, ಗೋವಾ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಫೆಬ್ರುವರಿ 14ರಂದು ಮತದಾನ ನಡೆಯಲಿದೆ.

ಮತ ಎಣಿಕೆ:
ಪಂಚ ರಾಜ್ಯಗಳ ಮತ ಎಣಿಕೆಯು ಮಾರ್ಚ್ 10, ಗುರುವಾರ ನಡೆಯಲಿದೆ. ಅಂದು ರಾಜಕೀಯ ಪಕ್ಷ, ಮುಖಂಡರ ಭವಿಷ್ಯ ನಿರ್ಧಾರವಾಗಲಿದೆ.

ಮತದಾನ ಒಂದು ತಾಸು ವಿಸ್ತರಣೆ:
ಕೋವಿಡ್ ಸುರಕ್ಷತಾ ಮಾನದಂಡ ಪಾಲನೆಯ ಹಿನ್ನೆಲೆಯಲ್ಲಿ ಮತದಾನವನ್ನು ಒಂದು ತಾಸು ವಿಸ್ತರಿಸಲಾಗಿದೆ. ಎಲ್ಲ ಐದು ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದೆ.

ಇವಿಎಂ ಯಂತ್ರದಲ್ಲಿ ದೋಷವಿಲ್ಲ...
ಇವಿಎಂಯಂತ್ರದಲ್ಲಿ ಯಾವುದೇ ದೋಷವಿಲ್ಲ. ಇದು 2004ರಿಂದಲೇ ಅಸ್ತಿತ್ವದಲ್ಲಿದ್ದು, 350 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅತ್ಯಂತ ನಿಖರವಾದ ಫಲಿತಾಂಶಗಳು, ನಿಖರವಾದ ವ್ಯವಸ್ಥೆ ಮತ್ತು ತ್ವರಿತ ಮತ ಎಣಿಕೆ ಸೌಲಭ್ಯವನ್ನು ನೀಡುವ ಈ ಯಂತ್ರವನ್ನು ನಮ್ಮ ದೇಶ ಅಭಿವೃದ್ಧಿಪಡಿಸಿದೆ. ಈ ಕುರಿತು ನೀವು ಹೆಮ್ಮೆಪಡಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ತಿಳಿಸಿದ್ದಾರೆ.

ದೇಹದ ಉಷ್ಣಾಂಶ ಹೆಚ್ಚಿದ್ದರೆ?
ಕೋವಿಡ್ ಹಿನ್ನೆಲೆಯಲ್ಲಿ ಮತದಾರರ ದೇಹದ ಉಷ್ಣಾಂಶ ನಿಗದಿತ ಮಾನದಂಡಕ್ಕಿಂತಲೂ ಹೆಚ್ಚಿದ್ದರೆ ಟೋಕನ್ ನೀಡಲಾಗುತ್ತದೆ ಮತ್ತು ಮತದಾನದ ಕೊನೆಯ ಗಂಟೆಯಲ್ಲಿ ಮತದಾನ ಹಕ್ಕು ಚಲಾಯಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಜ.15ರವರೆಗೆಬಹಿರಂಗ ಪ್ರಚಾರಕ್ಕೆಅವಕಾಶವಿಲ್ಲ:
ಜನವರಿ 15ರವರೆಗೆ ರಾಜಕೀಯ ಪಕ್ಷಗಳು ಅಥವಾ ಚುನಾವಣೆಗೆ ಸಂಬಂಧಿಸಿದ ಯಾವುದೇಬಹಿರಂಗ ಪ್ರಚಾರ ಹಾಗೂ ರೋಡ್ ಶೋ ನಡೆಸಲು ಅವಕಾಶ ಇರುವುದಿಲ್ಲ.ಅಲ್ಲದೆ ಎಲ್ಲ ಪಕ್ಷಗಳಿಗೂ ವರ್ಚುವಲ್ ಸಮಾವೇಶ ನಡೆಸಲು ಸೂಚನೆ ನೀಡಲಾಗಿದೆ. ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ಚುನಾವಣಾ ಆಯೋಗವು ಸೂಕ್ತ ಕ್ರಮ ಪ್ರಕಟಿಸಲಿದೆ.

80 ವರ್ಷ ಮೇಲ್ಪಟ್ಟವರಿಗೆ ಅಂಚೆ ಮೂಲಕ ಮತದಾನ:
80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು,ವಿಶೇಷ ಚೇತನ ವ್ಯಕ್ತಿಗಳು ಮತ್ತು ಕೋವಿಡ್ ರೋಗಿಗಳು ಅಂಚೆ ಮತ ಪತ್ರದ ಮೂಲಕ ಮತ ಚಲಾಯಿಸಬಹುದು.

ಪ್ರತಿ ಕ್ಷೇತ್ರದಲ್ಲೂ ಮಹಿಳೆಯರಿಂದ ನಿರ್ವಹಿಸಲ್ಪಡುವ ಮತಗಟ್ಟೆ...
ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಮಹಿಳೆಯರಿಂದ ನಿರ್ವಹಿಸಲ್ಪಡುವ ಕನಿಷ್ಠ ಒಂದು ಮತಗಟ್ಟೆಯನ್ನು ಕಡ್ಡಾಯವಾಗಿ ಸ್ಥಾಪಿಸಲಾಗುವುದು. ಒಟ್ಟು 690 ವಿಧಾನಸಭೆ ಕ್ಷೇತ್ರಗಳಿವೆ. ಆದರೆ ಅಂತಹ 1,620 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಒಟ್ಟು 18.34 ಕೋಟಿ ಮತದಾರರು:
ಪಂಚ ರಾಜ್ಯಗಳಲ್ಲಿ 8.55 ಕೋಟಿ ಮಹಿಳಾ ಮತದಾರರು ಸೇರಿದಂತೆ ಒಟ್ಟು 18.34 ಕೋಟಿ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. 24.9 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ಲಸಿಕೆ ಕಡ್ಡಾಯ:
ಎಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯವಾಗಿದೆ. ಅವರನ್ನು ಕೇಂದ್ರ ಸರ್ಕಾರವು ಮುಂಚೂಣಿಯ ಸೇನಾನಿಗಳಾಗಿ ಗುರುತಿಸಿದ್ದು, ಬೂಸ್ಟರ್ ಡೋಸ್‌ಗೆ ಅರ್ಹರಾಗಿರುತ್ತಾರೆ.

ಪಂಚ ರಾಜ್ಯಗಳ ವಿಧಾನಸಭೆ ಕ್ಷೇತ್ರಗಳ ಸಂಖ್ಯಾ ಬಲಾಬಲ:
ಉತ್ತರ ಪ್ರದೇಶ: 403
ಪಂಜಾಬ್: 117
ಉತ್ತರಾಖಂಡ: 70
ಮಣಿಪುರ: 60
ಗೋವಾ: 40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.