ADVERTISEMENT

ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ ಕೊನೆಯ ವೇತನದ ಶೇ 50ರಷ್ಟು ಪಿಂಚಣಿ: CM ಶಿಂದೆ

ಪಿಟಿಐ
Published 1 ಮಾರ್ಚ್ 2024, 14:22 IST
Last Updated 1 ಮಾರ್ಚ್ 2024, 14:22 IST
<div class="paragraphs"><p>ಏಕನಾಥ ಶಿಂದೆ</p></div>

ಏಕನಾಥ ಶಿಂದೆ

   

ಮುಂಬೈ: ಮಹಾರಾಷ್ಟ್ರ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಯನ್ನು ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಶುಕ್ರವಾರ ಘೋಷಿಸಿದ್ದಾರೆ. 2005ರ ನ.1ರ ನಂತರ ಸರ್ಕಾರಿ ನೌಕರಿಗೆ ಸೇರಿದವರಿಗೆ ಇದು ಅನ್ವಯಿಸಲಿದೆ.

ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಸರ್ಕಾರದ ನಿರ್ಧಾರವನ್ನು ತಿಳಿಸಿದ ಮುಖ್ಯಮಂತ್ರಿ ಶಿಂದೆ, ‘ಪರಿಷ್ಕೃತ ಪಿಂಚಣಿ ಯೋಜನೆಯನ್ನು ಪಡೆಯಬಯಸುವ ನೌಕರರಿಗೆ ತುಟ್ಟಿ ಭತ್ಯೆ ಸಹಿತ ಅವರು ಪಡೆಯುವ ಕೊನೆಯ ವೇತನದ ಶೇ 50ರಷ್ಟು ಮೊತ್ತ ಸಿಗಲಿದೆ. ಈ ಪಿಂಚಣಿ ಮೊತ್ತದ ಶೇ 60ರಷ್ಟು ಮತ್ತು ತುಟ್ಟಿ ಭತ್ಯೆಯು ಕುಟುಂಬ ಪಿಂಚಣಿಯಾಗಿ ಸಿಗಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘2015ರ ಏ. 1ರಿಂದ ಅನ್ವಯವಾಗುವಂತೆ ಈ ಪಿಂಚಣಿ ಯೋಜನೆ ಜಾರಿಗೆ ಬರಲಿದೆ. ರಾಜ್ಯದಲ್ಲಿರುವ ಒಟ್ಟು 13.45 ಲಕ್ಷ ನೌಕರರಲ್ಲಿ 8.27 ಲಕ್ಷ ನೌಕರರಿಗೆ ಈ ಪಿಂಚಣಿ ಯೋಜನೆ ಅನ್ವಯವಾಗಲಿದೆ’ ಎಂದಿದ್ದಾರೆ.

‘NPS ಪರಿಷ್ಕರಣೆಗೆ 2023ರ ಮಾರ್ಚ್‌ನಲ್ಲಿ ಸಮಿತಿಯೊಂದನ್ನು ಸರ್ಕಾರ ರಚಿಸಿತ್ತು. ಹಳೇ ಪಿಂಚಣಿ ಯೋಜನೆ ಮತ್ತು NPS ಅಧ್ಯಯನ ನಡೆಸಿದ ಸಮಿತಿಯು 2005ರ ನ. 1ರಿಂದ ಸರ್ಕಾರಿ ನೌಕರಿಗೆ ಸೇರಿದವರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ಶಿಫಾರಸು ಮಾಡಿದೆ’ ಎಂದು ಏಕನಾಥ ಶಿಂದೆ ಸದನದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.