ಬಾಬಾ ವಂಗಾ
ಚಿತ್ರ ಕೃಪೆ: @MarioNawfal
ಬಲ್ಗೇರಿಯಾದ ಬಾಬಾ ವಂಗಾ 1996ರಲ್ಲಿ ನಿಧನರಾಗಿದ್ದಾರೆ. ಆದರೆ, ಅವರ ಅನುಯಾಯಿಗಳು ಅವರು ಬಿಟ್ಟು ಹೋಗಿರುವ ಭವಿಷ್ಯವಾಣಿಗಳನ್ನು ಇಟ್ಟುಕೊಂಡು ಅಧ್ಯಯನ ಮಾಡುತ್ತಲೇ ಇದ್ದಾರೆ. ಹುಟ್ಟು ಕುರುಡಿಯಾಗಿದ್ದರೂ ಅವರು ಹೇಳಿರುವ ಅನೇಕ ಭವಿಷ್ಯವಾಣಿಗಳು ನಿಜವಾಗುತ್ತಿವೆ. ಅದರಂತೆ 2026ರಲ್ಲಿ ಸಂಭವಿಸಬಹುದಾದ ಘಟನೆಗಳ ಕುರಿತು ಬಾಬಾ ವಂಗಾ ಏನು ಭವಿಷ್ಯ ನುಡಿದಿದ್ದಾರೆ ಎಂಬುದನ್ನು ನೋಡೋಣ.
ಮೂರನೇ ಮಹಾಯುದ್ಧ: ಈಗಾಗಲೇ ಎರಡು ವಿಶ್ವ ಯುದ್ಧಗಳನ್ನು ಕಂಡಿರುವ ಜಗತ್ತು, 2026ರಲ್ಲಿ ಮೂರನೇ ಮಹಾಯುದ್ಧವನ್ನು ಕಾಣುವ ಸಂಭವವಿದೆ ಎಂದು ಬಾಬಾ ವಂಗಾ ಅವರು ಭವಿಷ್ಯ ನುಡಿದಿದ್ದಾರೆ. ಯುದ್ಧವು ಪೂರ್ವದ ರಾಷ್ಟ್ರಗಳಲ್ಲಿ ಆರಂಭವಾಗಿ ಅಮೆರಿಕ, ರಷ್ಯಾ ಹಾಗೂ ಚೀನಾದವರೆಗೂ ವ್ಯಾಪಿಸಲಿದೆ ಎಂದು ತಿಳಿಸಿದ್ದಾರೆ.
ಭೂಮಿಗೆ ಅನ್ಯಗ್ರಹ ಜೀವಿಗಳ ಆಗಮನ: ಈ ವರ್ಷ ಅನ್ಯಗ್ರಹ ಜೀವಿಗಳು (ಏಲಿಯನ್‌ಗಳು) ಮಾನವನ ಸಂಪರ್ಕಕ್ಕೆ ಬರುವ ಸಾಧ್ಯತೆ ಇದೆ. ಅಲ್ಲದೇ ಈ ವರ್ಷ 3I/ATLAS ಎಂಬ ಆಕಾಶಕಾಯೆ ಭೂಮಿಯ ಸಮೀಪದಿಂದ ಹಾದುಹೋಗಲಿದೆ ಎಂದು ಹೇಳಿದ್ದಾರೆ.
ಭೂಕಂಪನ: ಬಾಬಾ ವಂಗಾ ಹೇಳುವಂತೆ ಈ ವರ್ಷ ಪ್ರಪಂಚದಾದ್ಯಂತ ಭೂಕಂಪನ, ಸುನಾಮಿ, ಪ್ರವಾಹ ಮತ್ತು ಜ್ವಾಲಾಮುಖಿ ಸ್ಫೋಟಗೊಳ್ಳುವ ಸಂಭವವಿದೆ. ಇದು ಭೂಮಿಯ ಶೇ 8 ರಿಂದ 10 ರಷ್ಟು ಪ್ರದೇಶದ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಿದ್ದಾರೆ.
ಆರ್ಥಿಕತೆ ಕುಸಿತ: 2026ರಲ್ಲಿ ವಿಶ್ವದ ಆರ್ಥಿಕತೆ ಪಾತಾಳಕ್ಕೆ ಕುಸಿಯಲಿದೆ ಎಂಬುದನ್ನು ಹೇಳಿದ್ದಾರೆ. ಇದನ್ನು ಸ್ಕೈ ಹಿಸ್ಟರಿ ಸಹ ವರದಿ ಮಾಡಿದೆ.
ಪುಟಿನ್ ಆಡಳಿತ ಅಂತ್ಯ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಾಲ ಅಂತ್ಯವಾಗಿ ಹೊಸ ನಾಯಕ ಅಧ್ಯಕ್ಷನಾಗುತ್ತಾರೆ. ಇದು ಜಾಗತಿಕ ರಾಜಕೀಯವನ್ನು ಪುನಃ ರೂಪಿಸುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.
ಮನುಷ್ಯರ ಮೇಲೆ ಎಐ ನಿಯಂತ್ರ: 2026ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಅತೀ ಹೆಚ್ಚು ಬೆಳವಣಿಗೆಯಾಗಲಿದೆ. ಇದು ವಿವಿಧ ಕ್ಷೇತ್ರದಲ್ಲಿ ಮತ್ತಷ್ಟು ವಿಸ್ತರಣೆ ಕಾಣುವ ಮೂಲಕ ಮಾನವರ ಕೆಲಸ ಕಾರ್ಯಗಳ ಮೇಲೆ ನೇರ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.