
ನವದೆಹಲಿ: ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿದಿದ್ದು ಸರ್ಕಾರ ರಚನೆ ಮಾಡಿದೆ.
ಈ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆದ್ದು ಅಭ್ಯರ್ಥಿಗಳು ಹಾಗೂ ಅತಿ ಕಡಿಮೆ ಮತಗಳಿಂದ ಸೋತ ಅಭ್ಯರ್ಥಿಗಳ ಮಾಹಿತಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ರೂಪೌಲಿ ವಿಧಾನನಸಭಾ ಕ್ಷೇತ್ರದಲ್ಲಿ ಜೆಡಿ(ಯು) ಪಕ್ಷದ ಅಭ್ಯರ್ಥಿ 73,572 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಆರ್‌ಜೆಡಿ ಅಭ್ಯರ್ಥಿ ಇಲ್ಲಿ ಎರಡನೇ ಸ್ಥಾನ ಪಡೆದರು.
ದೀಗಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿನ ಅಂತರ 59,079 ಮತಗಳಾಗಿದ್ದವು. ಇಲ್ಲಿ CPI(ML)(L) ಅಭ್ಯರ್ಥಿ ಎರಡನೇ ಸ್ಥಾನಕ್ಕೆ ಕುಸಿದರು.
ಸುಗೌಲಿ ಕ್ಷೇತ್ರದಲ್ಲಿ ಎಲ್‌ಜೆಪಿ (ರಾಮ್ ವಿಲಾಸ್) ಅಭ್ಯರ್ಥಿ 58,191 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಎರಡನೇ ಸ್ಥಾನಕ್ಕೆ ಕುಸಿದರು.
ಗೋಪಾಲಪುರ ಕ್ಷೇತ್ರದಲ್ಲಿ ಜೆಡಿ(ಯು) ಅಭ್ಯರ್ಥಿ 58,135 ಮತಗಳಿಂದ ಗೆದ್ದರು. ವಿಎಸ್‌ಐಪಿ ಪಕ್ಷದ ಅಭ್ಯರ್ಥಿ ಎರಡನೇ ಸ್ಥಾನ ಪಡೆದರು.
ಆರೈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 57,206 ಮತಗಳ ಅಂತರದಿಂದ ಗೆದ್ದರು. ವಿಎಸ್‌ಐಪಿ ಪಕ್ಷದ ಅಭ್ಯರ್ಥಿ ಎರಡನೇ ಸ್ಥಾನಕ್ಕೆ ಕುಸಿದರು.
ಕನಿಷ್ಠ ಮತಗಳ ಗೆಲುವು...
ಬಿಜೆಪಿ, ಬಿಎಸ್‌ಪಿ, ಜೆಡಿ(ಯು) ಹಾಗೂ ಆರ್‌ಜೆಡಿ ಪಕ್ಷಗಳು ಕೆಲ ಕ್ಷೇತ್ರಗಳಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಗೆಲುವು ದಾಖಲಿಸಿವೆ.
ಸಂದೇಶ ಕ್ಷೇತ್ರದಲ್ಲಿ ಜೆಡಿ(ಯು) ಅಭ್ಯರ್ಥಿಯು ಆರ್‌ಜೆಡಿ ಅಭ್ಯರ್ಥಿಯನ್ನು ಕೇವಲ 27 ಮತಗಳ ಅಂತರದಿಂದ ಸೋಲಿಸಿದರು.
ರಾಮಗಢದಲ್ಲಿ ಬಿಎಸ್‌ಪಿ ಅಭ್ಯರ್ಥಿಯು ಬಿಜೆಪಿ ಅಭ್ಯರ್ಥಿಯನ್ನು ಕೇವಲ 30 ಮತಗಳ ಅಂತರದಿಂದ ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.