
ಪ್ರಜಾವಾಣಿ ವಾರ್ತೆ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಮಂಗಳವಾರ ಹೊರಬಿದ್ದಿವೆ. ಎಲ್ಲ ಸಮೀಕ್ಷೆಗಳೂ ಎನ್‌ಡಿಎ ಪಾಳಯಕ್ಕೆ ಬಹುಮತ ನೀಡಿವೆ.
‘ಇಂಡಿಯಾ’ ಕೂಟವು ಬಹುಮತದಿಂದ ದೂರವೇ ಇರಲಿದೆ ಎಂದೂ ಹೇಳಿವೆ. ಹೊಸದಾಗಿ ಬಿಹಾರ ರಾಜಕಾರಣಕ್ಕೆ ಪ್ರವೇಶ ಪಡೆದಿದ್ದ, ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷವು ಖಾತೆ ತೆರೆಯಲಿದೆ ಎಂದು ಕೆಲವು ಸಮೀಕ್ಷೆಗಳು ಹೇಳಿವೆ.
ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂದು ‘ಪೀಪಲ್ಸ್ ಪಲ್ಸ್’ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ‘ಇಂಡಿಯಾ’ದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರಿಗೆ ಶೇ 32ರಷ್ಟು ಮತಗಳು ಬಂದಿವೆ. ಎರಡನೇ ಸ್ಥಾನದಲ್ಲಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶೇ 30ರಷ್ಟು ಮತ ಪಡೆದಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.