ADVERTISEMENT

ಬಿಹಾರ ಚುನಾವಣೆ 2025: ಜನಸಂಖ್ಯೆಯಲ್ಲಿ ಪ್ರಮುಖ ಪಾಲು–ಪ್ರಾತಿನಿಧ್ಯ ನಗಣ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
   

ನವದೆಹಲಿ: ಇಂದಿರಾ ಗಾಂಧಿ ಹತ್ಯೆಯ ನಂತರ ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅಧಿಕ ಸಂಖ್ಯೆಯ ಮುಸ್ಲಿಂ ಶಾಸಕರು ಆಯ್ಕೆಯಾಗಿ ಬಂದಿದ್ದರು. ಆಗ ಕಾಂಗ್ರೆಸ್‌ ಪಕ್ಷವು ಮೂರನೇ ಎರಡರಷ್ಟು ಬಹುಮತ ಗಳಿಸಿತ್ತು. 2005ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ–ಜೆಡಿಯು ಮೈತ್ರಿಕೂಟವು ಸರ್ಕಾರ ರಚಿಸಿತ್ತು. ಆಗ ಕಡಿಮೆ ಸಂಖ್ಯೆಯ ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದರು. 

2011ರ ಜನಗಣತಿಯ ‍‍ಪ್ರಕಾರ, ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 16.9ರಷ್ಟಿದೆ. 2023ರಲ್ಲಿ ಬಿಹಾರ ಸರ್ಕಾರ ನಡೆಸಿದ ಜಾತಿ ಸಮೀಕ್ಷೆ ಪ್ರಕಾರ, ಮುಸ್ಲಿಮರ ಜನಸಂಖ್ಯೆಯಲ್ಲಿ ಭಾರಿ ಬದಲಾವಣೆ ಆಗಿಲ್ಲ. 

1972ರ ವರೆಗೆ ಬಿಹಾರ ವಿಧಾನಸಭೆಯಲ್ಲಿ 239 ಸದಸ್ಯರು ಇದ್ದರು. ಅವಿಭಜಿತ ಬಿಹಾರ ವಿಧಾನಸಭೆಯು 324 ಸದಸ್ಯರನ್ನು ಹೊಂದಿತ್ತು. 2000ರಲ್ಲಿ ಜಾರ್ಖಂಡ್‌ ಪ್ರತ್ಯೇಕ ರಾಜ್ಯವಾಯಿತು. ‍ಪ್ರಸ್ತುತ ವಿಧಾನಸಭೆಯ ಸದಸ್ಯರ ಸಂಖ್ಯೆ 243. ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರ ಪಾಲು ಕನಿಷ್ಠ ಶೇ 6ರಿಂದ ಗರಿಷ್ಠ ಶೇ 11.5ರಷ್ಟಿದೆ. 

ADVERTISEMENT

ರಾಜ್ಯದಾದ್ಯಂತ ಮುಸ್ಲಿಮರ ಜನಸಂಖ್ಯೆ ಏಕರೂಪವಾಗಿ ಹಂಚಿಕೆ ಆಗಿಲ್ಲ. 2011ರ ಜನಗಣತಿಯ ಪ್ರಕಾರ, ಶೇ 40ರಷ್ಟು ಮುಸ್ಲಿಮರು ಆರು ಜಿಲ್ಲೆಗಳಲ್ಲೇ ಇದ್ದಾರೆ. ರಾಜ್ಯದಲ್ಲಿ ಏಳು ಉಪವಿಭಾಗಗಳಿವೆ. ಸೀಮಾಂಚಲದ ಪುರ್ನಿಯಾ, ಕಿಶನ್‌ಗಂಜ್‌ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯ ಮುಸ್ಲಿಮರು ಇದ್ದಾರೆ. ರಾಜ್ಯದಲ್ಲಿ ಈವರೆಗೆ 312 ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ 130 ಹಾಗೂ ಆರ್‌ಜೆಡಿಯಿಂದ 57 ಮಂದಿ ಚುನಾಯಿತರಾಗಿದ್ದಾರೆ. ಬಿಜೆಪಿಯಿಂದ ಆಯ್ಕೆಯಾಗಿರುವವರು ಬೆರಳೆಣಿಕೆ ಮಂದಿ. 

ಮುಸ್ಲಿಂ ಶಾಸಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.