ADVERTISEMENT

ಕೇರಳದಲ್ಲಿ ಹಕ್ಕಿ ಜ್ವರ; ಸುಮಾರು 1,800 ಕೋಳಿಗಳ ಸಾವು

ಪಿಟಿಐ
Published 12 ಜನವರಿ 2023, 4:51 IST
Last Updated 12 ಜನವರಿ 2023, 4:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಯಿಕ್ಕೋಡ್‌: ಕೇರಳದಲ್ಲಿ ಹಕ್ಕಿ ಜ್ವರ ಮತ್ತೆ ಕಾಣಿಸಿಕೊಂಡಿದ್ದು, ಕೋಯಿಕ್ಕೋಡ್‌‌ ಜಿಲ್ಲೆಯ ಫಾರ್ಮ್‌ವೊಂದರಲ್ಲಿ ಸುಮಾರು 1,800 ಕೋಳಿಗಳು ಸಾವನ್ನಪ್ಪಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಿಲ್ಲಾ ಪಂಚಾಯತಿ ನಿರ್ವಹಣೆಯಲ್ಲಿರುವ ಸ್ಥಳೀಯ ಫಾರಂನ ಕೋಳಿಗಳಲ್ಲಿ ಎಚ್‌5ಎನ್1 ಸೋಂಕು ಇರುವುದು ದೃಢಪಟ್ಟಿವೆ.

ಕೇಂದ್ರ ಮಾರ್ಗಸೂಚಿಯಂತೆ ಹಕ್ಕಿ ಜ್ವರ ತಡೆಗಟ್ಟಲು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಕೇರಳದ ಪಶುಸಂಗೋಪನಾ ಇಲಾಖೆ ಸಚಿವೆ ಜೆ. ಚಿಂಚುರಾಣಿ ನಿರ್ದೇಶನ ನೀಡಿದ್ದಾರೆ.

ADVERTISEMENT

ಮಧ್ಯಪ್ರದೇಶದ ಭೋಪಾಲದ ಪ್ರಯೋಗಾಲಯಕ್ಕೆ ಕಳುಹಿಸಲಾದ ಮಾದರಿಯಲ್ಲಿ ಏವಿಯನ್ ಇನ್‌ಫ್ಲುಯೆಂಜಾ ದೃಢಪಟ್ಟಿದೆ.

ಈ ಫಾರಂನಲ್ಲಿ 5,000ಕ್ಕೂ ಹೆಚ್ಚು ಕೋಳಿಗಳಿದ್ದು, ಅವುಗಳಲ್ಲಿ 1,800ರಷ್ಟು ಸೋಂಕಿನಿಂದಾಗಿ ಸಾವನ್ನಪ್ಪಿವೆ. ಇದೀಗ ಕೋಳಿಗಳನ್ನು ಕೊಲ್ಲಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.