ADVERTISEMENT

ಸಿಎಂ ಸ್ಟಾಲಿನ್ ಜನ್ಮದಿನಕ್ಕೆ ಚೀನಿ ಭಾಷೆಯಲ್ಲಿ ಶುಭ ಕೋರಿದ ತಮಿಳುನಾಡು ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2024, 11:25 IST
Last Updated 1 ಮಾರ್ಚ್ 2024, 11:25 IST
<div class="paragraphs"><p>ತಮಿಳುನಾಡು ಬಿಜೆಪಿ ಹಂಚಿಕೊಂಡಿರುವ ಪೋಸ್ಟ್</p></div>

ತಮಿಳುನಾಡು ಬಿಜೆಪಿ ಹಂಚಿಕೊಂಡಿರುವ ಪೋಸ್ಟ್

   

ತಮಿಳುನಾಡು: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ತಮ್ಮ 71ನೇ ಜನ್ಮದಿನ ಆಚರಿಸಿಕೊಂಡಿದ್ದು, ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ಆದರೆ ತಮಿಳುನಾಡು ಬಿಜೆಪಿ ಸ್ಟಾಲಿನ್‌ ಅವರಿಗೆ ಚೀನಾದ ಮ್ಯಾಂಡರಿನ್‌ ಭಾಷೆಯಲ್ಲಿ ಶುಭಾಶಯ ಕೋರಿದೆ.

ADVERTISEMENT

ಇಸ್ರೊದ ಹೊಸ ಘಟಕ ಸ್ಥಾಪನೆಗೆ ಶುಭಕೋರುವ ಜಾಹೀರಾತಿನಲ್ಲಿ ಚೀನಾ ಧ್ವಜ ಇರುವ ರಾಕೇಟ್ ಬಳಸಿದ್ದು ವಿವಾದ ಸೃಷ್ಟಿಯಾದ ಬೆನ್ನಲ್ಲೇ, ಈ ವ್ಯಂಗ್ಯಭರಿತ ಪೋಸ್ಟ್‌ ಹಾಕಿದೆ.

ಈ ಕುರಿತು ತಮಿಳುನಾಡು ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, 'ತಮಿಳುನಾಡು ಬಿಜೆಪಿ ಪರವಾಗಿ, ನಿಮ್ಮಿಷ್ಟದ ಭಾಷೆಯಲ್ಲೇ ನಿಮಗೆ ಜನ್ಮದಿನದ ಶುಭಕೋರುತ್ತಿದ್ದೇವೆ, ದೀರ್ಘಕಾಲ ಆರೋಗ್ಯದಿಂದ ಬದುಕಿ’ ಎಂದು ಬರೆದುಕೊಂಡಿದೆ.  

ತಮಿಳುನಾಡಿನ ಕುಲಶೇಖರಪಟ್ಟಿಣಂನಲ್ಲಿ ಇಸ್ರೊದ ರಾಕೆಟ್‌ ಉಡ್ಡಯನ ನೆಲೆ ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಮಿಳುನಾಡು ಮೀನುಗಾರಿಕೆ ಸಚಿವ ಅನಿತಾ ರಾಧಾಕೃಷ್ಣನ್ ನೀಡಿರುವ ಜಾಹೀರಾತುಗಳು ತಮಿಳು ದಿನಪತ್ರಿಕೆಗಳಲ್ಲಿ ಪ್ರಕಟವಾದ್ದವು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಭಾವಚಿತ್ರಗಳ ಜೊತೆಗೆ ರಾಕೆಟ್‌ವೊಂದರ ಚಿತ್ರವನ್ನು ಬಳಸಲಾಗಿತ್ತು. ರಾಕೆಟ್‌ನ ತುದಿಯಲ್ಲಿ ಚೀನಾ ಬಾವುಟ ಹಾಗೂ ಚೀನಿ ಅಕ್ಷರಗಳಿವೆ ಎಂಬ ಆರೋಪ ವಿವಾದ ಸೃಷ್ಟಿಸಿತ್ತು.

‘ಕುಲಶೇಖರಪಟ್ಟಿಣಂನಲ್ಲಿ ಇಸ್ರೊ ಸಂಕೀರ್ಣ ಸ್ಥಾಪನೆಯ ಶ್ರೇಯಸ್ಸನ್ನು ತಾನು ಪಡೆಯುವ ಸಲುವಾಗಿ ಡಿಎಂಕೆ, ಜಾಹೀರಾತಿನಲ್ಲಿ ಚೀನಾ ಬಾವುಟ ಹಾಗೂ ಭಾಷೆಯನ್ನು ಬಳಸಿಕೊಂಡಿದೆ’ ಬಿಜೆಪಿಯ ರಾಜ್ಯ ಘಟಕ ಆರೋಪ ಮಾಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.