ADVERTISEMENT

ಮೆಟ್ರೊ, ಬಸ್‌ ಟಿಕೆಟ್‌ ದರದಲ್ಲಿ ಸ್ತ್ರೀಯರಿಗೆ ರಿಯಾಯಿತಿ: ಬಿಜೆಪಿ ಪ್ರಣಾಳಿಕೆ

ಪಿಟಿಐ
Published 8 ಜನವರಿ 2026, 14:40 IST
Last Updated 8 ಜನವರಿ 2026, 14:40 IST
<div class="paragraphs"><p>ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಖಾತೆ ಸಚಿವ ಮುರಳೀಧರ್‌ ಮೊಹೊಲ್‌ ಹಾಗೂ ಬಿಜೆಪಿ ನಾಯಕಿ ಮಾಧುರಿ ಮಿಸಾಲ್‌ ಸೇರಿದಂತೆ ಹಲವು ಬಿಜೆಪಿ ನಾಯಕರು, ಪುಣೆ ಮಹಾನಗರ ಪಾಲಿಕೆ ಚುನಾವಣೆಗೆ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದರು</p></div>

ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಖಾತೆ ಸಚಿವ ಮುರಳೀಧರ್‌ ಮೊಹೊಲ್‌ ಹಾಗೂ ಬಿಜೆಪಿ ನಾಯಕಿ ಮಾಧುರಿ ಮಿಸಾಲ್‌ ಸೇರಿದಂತೆ ಹಲವು ಬಿಜೆಪಿ ನಾಯಕರು, ಪುಣೆ ಮಹಾನಗರ ಪಾಲಿಕೆ ಚುನಾವಣೆಗೆ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದರು

   

– ಪಿಟಿಐ ಚಿತ್ರ

ಪುಣೆ: ಮಹಾರಾಷ್ಟ್ರದ ಪುಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ಮೆಟ್ರೊ ರೈಲು ಮತ್ತು ನಗರ ಬಸ್‌ಗಳ ಟಿಕೆಟ್‌ ದರದಲ್ಲಿ ಮಹಿಳೆಯರಿಗೆ ರಿಯಾಯಿತಿ ನೀಡಲಾಗುವುದು ಎಂದು ಬಿಜೆಪಿ ಆಶ್ವಾಸನೆ ನೀಡಿದೆ. 

ADVERTISEMENT

ಪುಣೆ ಸಂಸದ ಮುರಳೀಧರ್‌ ಮೊಹೊಲ್‌, ರಾಜ್ಯ ಸಚಿವರಾದ ಚಂದ್ರಕಾಂತ ಪಾಟೀಲ್ ಹಾಗೂ ಮಾಧುರಿ ಮಿಸಾಲ್‌ ಸೇರಿದಂತೆ ಪಕ್ಷದ ಹಲವು ಶಾಸಕರು ಹಾಗೂ ನಾಯಕರ ಸಮ್ಮುಖದಲ್ಲಿ ‘ಸಂಕಲ್ಪ ಪತ್ರ’ ಎಂಬ ಶೀರ್ಷಿಕೆಯ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿತು. 

75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಗರ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ, ರಾಜ್ಯ ಸರ್ಕಾರದ ‘ಲಾಡ್ಕಿ ಬಹೀಣ್‌ ಯೋಜನೆ’ಯಡಿ ಬಡ ಮಹಿಳೆಯರಿಗೆ ಪ್ರತಿ ತಿಂಗಳು ₹2,500 ಆರ್ಥಿಕ ಸಹಾಯಧನ ಹಾಗೂ 500 ಚದರ ಅಡಿಗಿಂತ ಕಡಿಮೆ ಅಳತೆಯಲ್ಲಿರುವ ಮನೆ ಹಾಗೂ ಫ್ಲ್ಯಾಟ್‌ಗಳ ಮೇಲಿನ ಆಸ್ತಿ ತೆರಿಗೆ ಮನ್ನಾ ಮಾಡುವುದಾಗಿ ಪಕ್ಷವು ಜನರಿಗೆ ಆಶ್ವಾಸನೆ ನೀಡಿದೆ. 

ಪ್ರಣಾಳಿಕೆ ಬಿಡುಗಡೆ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುರಳೀಧರ್‌ ಮೊಹೊಲ್‌ ‘ನಗರದಲ್ಲಿ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಲಾಗುವುದು. ಶೀಘ್ರದಲ್ಲಿ ಇಲ್ಲಿ ಏಮ್ಸ್‌ ಆಸ್ಪತ್ರೆ ನಿರ್ಮಿಸುತ್ತೇವೆ ಹಾಗೂ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ ವೇನಲ್ಲಿ ಡೇಟಾ ಸೆಂಟರ್‌ ಅನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು. 

ಪುಣೆ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದಲ್ಲಿ ಇತರ 28 ಸ್ಥಳೀಯ ಸಂಸ್ಥೆಗಳಿಗೆ ಜನವರಿ 15ರಂದು ಚುನಾವಣೆ ನಡೆಯಲಿದೆ. ಜನವರಿ 16ರಂದು ಫಲಿತಾಂಶ ಪ್ರಕಟವಾಗಲಿದೆ. ಪುಣೆಯಲ್ಲಿ ಒಟ್ಟು 165 ಸ್ಥಾನಗಳಿದ್ದು, ಬಿಜೆಪಿಯು ಎಲ್ಲ ಸ್ಥಾನಗಳಿಗೂ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. 

ಏಕನಾಥ್‌ ಶಿಂದೆ ಬಣದ ಶಿವಸೇನೆಯು 123, ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ 138, ಕಾಂಗ್ರೆಸ್‌ 93, ಶರದ್‌ ಪವಾರ್‌ ಅವರ ಎನ್‌ಸಿಪಿ 43 ಹಾಗೂ ಉದ್ಧವ್‌ ಠಾಕ್ರೆ ಬಣದ ಶಿವಸೇನೆ 44 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.