ADVERTISEMENT

ತೆಲಂಗಾಣ MLC ಚುನಾವಣೆ: 2ರಲ್ಲಿ ಬಿಜೆಪಿ ಬೆಂಬಲಿತರ ಗೆಲುವು, ಕಾಂಗ್ರೆಸ್ ಶೂನ್ಯ

ಪಿಟಿಐ
Published 6 ಮಾರ್ಚ್ 2025, 6:09 IST
Last Updated 6 ಮಾರ್ಚ್ 2025, 6:09 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಹೈದರಾಬಾದ್‌: ಫೆ. 27 ರಂದು ತೆಲಂಗಾಣ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಇಬ್ಬರು ಗೆಲುವು ಸಾಧಿಸಿದ್ದಾರೆ. ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿಯ ಪಾಲಾಗಿದ್ದು, ಆಡಳಿತರೂಢ ಕಾಂಗ್ರೆಸ್‌ ಯಾವುದೇ ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದೆ.

ಮೇಡಕ್–ನಿಜಾಮಾಬಾದ್‌–ಅದಿಲಾಬಾದ್–ಕರೀಂನಗರ ಪದವೀಧರ ಕ್ಷೇತ್ರದಿಂದ ಬಿಜೆಪಿ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಅಂಜಿ ರೆಡ್ಡಿಯವರು ಕಾಂಗ್ರೆಸ್‌ನ ನರೇಂದ್ರ ರೆಡ್ಡಿ ವಿರುದ್ಧ 5 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದಾರೆ.

ADVERTISEMENT

ಮೇಡಕ್-ನಿಜಾಮಾಬಾದ್-ಆದಿಲಾಬಾದ್-ಕರೀಂನಗರ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳು ಮತ್ತು ವಾರಂಗಲ್-ಖಮ್ಮಮ್-ನಲ್ಗೊಂಡ ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

ಮೇಡಕ್-ನಿಜಾಮಾಬಾದ್-ಅದಿಲಾಬಾದ್-ಕರೀಂನಗರ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಮಲ್ಕಾ ಕೊಮರಯ್ಯ ಗೆಲುವು ಸಾಧಿಸಿದ್ದಾರೆ.

ವಾರಂಗಲ್-ಖಮ್ಮಮ್-ನಲ್ಗೊಂಡ ಶಿಕ್ಷಕರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಶ್ರೀಪಾಲ್ ರೆಡ್ಡಿ ಪಿಂಗಿಲಿ (ಶಿಕ್ಷಕರ ಸಂಘದಿಂದ ಬೆಂಬಲಿತ) ಗೆದ್ದಿದ್ದಾರೆ.

ಎರಡು ಶಿಕ್ಷಕರ ಕ್ಷೇತ್ರಗಳ ಫಲಿತಾಂಶಗಳನ್ನು ಸೋಮವಾರ ಘೋಷಿಸಲಾಗಿತ್ತು.

ಮಾನ್ಯ ಮತ್ತು ಅಮಾನ್ಯ ಮತಗಳನ್ನು ಪ್ರತ್ಯೇಕಿಸಿ, ನಂತರ ಆದ್ಯತೆಯ ಮತಗಳನ್ನು ಎಣಿಕೆ ಮಾಡಬೇಕಿದ್ದರಿಂದ ಮತ ಎಣಿಕೆ ವಿಳಂಬವಾಗಿತ್ತು.

ಮೂರು ಎಂಎಲ್‌ಸಿ ಸ್ಥಾನಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದ್ದು, ರಾಜ್ಯದಲ್ಲಿ ಬಿಜೆಪಿಗೆ ನೈತಿಕ ಸ್ಥೈರ್ಯವನ್ನು ನೀಡಿದೆ.

ಬಿಜೆಪಿ ಮೂರು ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ‌ಆಡಳಿತಾರೂಢ ಕಾಂಗ್ರೆಸ್ ಪದವೀಧರರ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಯನ್ನು ಹಾಕಿತ್ತು. ಬಿಆರ್‌ಎಸ್ ಚುನಾವಣೆಯಿಂದ ದೂರ ಉಳಿದಿತ್ತು.

ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ, ಬಂಡಿ ಸಂಜಯ್ ಕುಮಾರ್ ಮತ್ತು ಇತರ ಬಿಜೆಪಿ ನಾಯಕರು ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು.

ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ ಮಹೇಶ್ ಕುಮಾರ್ ಗೌಡ್ ಮತ್ತು ಇತರ ಹಿರಿಯ ಪಕ್ಷದ ನಾಯಕರು ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಬೆಂಬಲಿಸಿ ಪ್ರಚಾರ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.