ADVERTISEMENT

ಬಿಎಂಸಿ ಚುನಾವಣೆ | ಮತಗಟ್ಟೆ ಸಮೀಕ್ಷೆ: ಬಿಜೆಪಿ–ಶಿವಸೇನಾ ಮೈತ್ರಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 18:54 IST
Last Updated 15 ಜನವರಿ 2026, 18:54 IST
<div class="paragraphs"><p>ಚುನಾವಣೆಯಲ್ಲಿ ಮತ ಚಲಾಯಿಸಿದ ಮಹಿಳೆಯರು</p></div>

ಚುನಾವಣೆಯಲ್ಲಿ ಮತ ಚಲಾಯಿಸಿದ ಮಹಿಳೆಯರು

   

ಮುಂಬೈ: ಬೃಹನ್‌ ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವು ಗೆಲುವು ಸಾಧಿಸಲಿದೆ ಎಂದುಎಂದು ಹಲವು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

‘ಮೈ ಆಕ್ಸಿಸ್‌ ಇಂಡಿಯಾ’ ಸಂಸ್ಥೆಯ ಪ್ರಕಾರ, ಈ ಮೈತ್ರಿಕೂಟವು ಶೇ 42ರಷ್ಟು ಮತಗಳೊಂದಿಗೆ 131–151 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಶಿವಸೇನೆ (ಉದ್ಧವ್‌ ಬಣ) ಮತ್ತು ಎಂಎನ್‌ಎಸ್‌ ಮೈತ್ರಿಕೂಟವು ಶೇ 32ರಷ್ಟು ಮತಗಳನ್ನು ಪಡೆದು 58–68 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಈ ಸಂಸ್ಥೆ ಅಂದಾಜಿಸಿದೆ.

ADVERTISEMENT

ಕಾಂಗ್ರೆಸ್‌, ವಂಚಿತ ಬಹುಜನ ಆಘಾಡಿ ಮತ್ತು ರಾಷ್ಟ್ರೀಯ ಸಮಾಜ್‌ ಪಕ್ಷದ ಮೈತ್ರಿಕೂಟವು ಶೇ 13ರಷ್ಟು ಮತಗಳಿಂದ 12–16 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದೂ ಸಂಸ್ಥೆ ಹೇಳಿದೆ.

ಪುಣೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯು 70 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಎನ್‌ಸಿಪಿ (ಅಜಿತ್‌ ಬಣ) ಮತ್ತು ಎನ್‌ಸಿಪಿ (ಶರದ್‌ ಪವಾರ್‌ ಬಣ) ಮೈತ್ರಿಕೂಟವು 55 ಸ್ಥಾನಗಳನ್ನು ಗೆಲ್ಲಿಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.