ಸಾಂದರ್ಭಿಕ ಚಿತ್ರ – ರಾಯಿಟರ್ಸ್
ಮುಂಬೈ: ವಾಣಿಜ್ಯ ಹಡಗಿನಿಂದ ನಾಪತ್ತೆಯಾಗಿದ್ದ ಸಿಬ್ಬಂದಿಯ ಶವ ಅರಬ್ಬೀ ಸಮುದ್ರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತ ಸುನೀಲ್ ಪಚಾರ್ (23) ಅವರು ರಾಜಸ್ಥಾನದವರಾಗಿದ್ದು, ವಾಣಿಜ್ಯ ಹಡಗಿನಲ್ಲಿ 2024ರ ನವೆಂಬರ್‌ನಿಂದ ತಾತ್ಕಾಲಿಕ ನೌಕರನಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಹಡಗಿನ ಡೆಕ್‌ನಲ್ಲಿ ಮಲಗಲು ಹೋಗಿದ್ದ ಅವರು, ಬಳಿಕ ನಾಪತ್ತೆಯಾಗಿದ್ದರು.
ಸುನೀಲ್, ಹಡಗಿನಲ್ಲಿ ಕಾಣದಿದ್ದಾಗ, ಸಹೋದ್ಯೋಗಿಗಳು ಕೂಡಲೇ ಯೆಲ್ಲೋ ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಸ್ಸಾಕ್ ಡಾಕ್ ಪ್ರದೇಶದಲ್ಲಿ ಶವ ತೇಲುತ್ತಿರುವುದನ್ನು ಬುಧವಾರ ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ, ಸ್ಥಳಕ್ಕೆ ಧಾವಿಸಿದ ಪೊಲೀಸರು, ಇಂದು ಮಧ್ಯಾಹ್ನ ಶವವನ್ನು ವಶಕ್ಕೆ ಪಡೆದು, ಗುರುತು ಪತ್ತೆ ಹಚ್ಚಿದ್ದಾರೆ. ಸುನೀಲ್, ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎನ್ನಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ನಿಖರ ಕಾರಣ ಗೊತ್ತಾಗಲಿದೆ. ಶವವನ್ನು ಸೇಂಟ್ ಜಾರ್ಜ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ದಕ್ಷಿಣ ಮುಂಬೈನ ಕೊಲಬಾ ಪೊಲೀಸ್ ಠಾಣೆಯಲ್ಲಿ 'ಆಕಸ್ಮಿಕ ಸಾವು' ಪ್ರಕರಣ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.