ಜೈಸಲ್ಮೇರ್: ರಾಜಸ್ಥಾನ ಜೈಸಲ್ಮೇರ್‌ನ ಭಾರತ-ಪಾಕ್ ಗಡಿಯಲ್ಲಿ ಮಹಿಳಾ ಸಿಬ್ಬಂದಿ ಸೇರಿದಂತೆ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ದೀಪಾವಳಿ ಹಬ್ಬವನ್ನು ಆಚರಿಸಿ, ಸಂಭ್ರಮಿಸಿದೆ.
ದೇಶದಾದ್ಯಂತ ದೀಪಾವಳಿ ಹಬ್ಬ ಮನೆಮಾಡಿದೆ. ಈ ನಡುವೆ ಬಿಎಸ್‌ಎಫ್ ಯೋಧರು ಪರಸ್ಪರ ಸಿಹಿಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ಬಿಎಸ್‌ಎಫ್ ಯೋಧೆ, ನಾವು ಗಡಿಯಲ್ಲಿ ದೀಪಾವಳಿ ಹಬ್ಬವನ್ನು ಬಹಳ ಖುಷಿಯಾಗಿ ಆಚರಿಸಿದ್ದೇವೆ. ಪ್ರಧಾನ ಕಚೇರಿಯಿಂದ ನಮಗೆ ಸಿಹಿತಿಂಡಿಗಳು ಹಾಗೂ ಪಟಾಕಿ ಬಂದಿದೆ. ರಂಗೋಲಿಗಳನ್ನು ಬಿಡಿಸಿದ್ದೇವೆ. ದೀಪಗಳನ್ನು ಹಚ್ಚಿ, ಪಟಾಕಿ ಸಿಡಿಸಿದ್ದೇವೆ ಎಂದರು.
'ಇದೇ ವೇಳೆ ಒಂದು ಗುಂಡು ಒಬ್ಬ ಶತ್ರು ಎಂದು ತರಬೇತಿಯನ್ನು ನಮ್ಮ ಕಮಾಂಡರ್‌ಗಳು ಹೇಳಿಕೊಟ್ಟಿದ್ದಾರೆ' ಎಂದು ಯೋಧೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.