ADVERTISEMENT

ಬಿಎಸ್‌ಎಫ್‌ | 2.76 ಲಕ್ಷ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ: ಅಮಿತ್‌ ಶಾ

ಪಿಟಿಐ
Published 21 ನವೆಂಬರ್ 2025, 16:00 IST
Last Updated 21 ನವೆಂಬರ್ 2025, 16:00 IST
ಅಮಿತ್‌ ಶಾ
ಅಮಿತ್‌ ಶಾ   

ನವದೆಹಲಿ: ಬಿಎಸ್‌ಎಫ್ ಈಗ 193 ತುಕಡಿಗಳನ್ನು ಹೊಂದಿದ್ದು 2.76 ಲಕ್ಷಕ್ಕೂ ಹೆಚ್ಚು ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಮಿತ್‌ ಶಾ ಮಾಹಿತಿ ನೀಡಿದರು.

ಈ ಯೋಧರು ಪ್ರಸ್ತುತ ಭಾರತ– ಪಾಕಿಸ್ತಾನ ಗಡಿಯಲ್ಲಿ 2289 ಕಿ.ಮೀ ಮತ್ತು ಬಾಂಗ್ಲಾದೇಶದೊಂದಿಗಿನ ಗಡಿಯ 4095 ಕಿ.ಮೀ ಉದ್ದಕ್ಕೂ ಕಾವಲು ಮತ್ತು ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.

‘2026ರ ಮಾರ್ಚ್‌ 31ರ ಒಳಗಾಗಿ ದೇಶದಲ್ಲಿ ನಕ್ಸಲ್‌ ಪಿಡುಗನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಬದ್ಧರಾಗಿದ್ದೇವೆ. ಬಿಎಸ್‌ಎಫ್‌ ಯೋಧರು ಛತ್ತೀಸಗಢದಲ್ಲಿ 127 ನಕ್ಸಲರನ್ನು ಶರಣಾಗುವಂತೆ ಮಾಡಿದ್ದು 73 ಮಂದಿಯನ್ನು ಬಂಧಿಸಿ 22 ನಕ್ಸಲರನ್ನು ಹತ್ಯೆಗೈದಿದ್ದಾರೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.