
ಸಿಬಿಐ
ನವದೆಹಲಿ: ತಂತ್ರಜ್ಞಾನಗಳ ನೆರವಿನೊಂದಿಗೆ ಅಮೆರಿಕd ಪ್ರಜೆಗಳಿಗೆ 8.5 ಮಿಲಿಯನ್ ಡಾಲರ್‌ನಷ್ಟಯ ವಂಚಿಸುತ್ತಿದ್ದ ಅಂತರರಾಷ್ಟ್ರೀಯ ಸೈಬರ್ ಅಪರಾಧ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಕೇಂದ್ರೀಯ ತನಿಖಾ ದಳದ(ಸಿಬಿಐ) ಕಾರ್ಯವನ್ನು ಅಮೆರಿಕ ಶ್ಲಾಘಿಸಿದೆ.
‘ಇದು ಅಮೆರಿಕ ಮತ್ತು ಭಾರತದ ಪಾಲುದಾರಿಕೆಯ ಕಾರ್ಯಕ್ಕೊಂದು ಉತ್ತಮ ಉದಾಹರಣೆ’ ಎಂದು ಅಮೆರಿಕ ಬಣ್ಣಿಸಿದೆ.
‘ನಮ್ಮ ಪ್ರಜೆಗಳನ್ನು ಸುರಕ್ಷಿತವಾಗಿಸುವಲ್ಲಿ ಎರಡೂ ದೇಶಗಳು ನೀಡುತ್ತಿರುವ ಕಾನೂನು ಸಹಕಾರಕ್ಕೆ ಧನ್ಯವಾದಗಳು’ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
‘ಅಮೆರಿಕ–ಭಾರತ ಪಾಲುದಾರಿಕೆ ಕಾರ್ಯಕ್ಕೆ ಇದೊಂದು ಉತ್ತಮ ಉದಾಹರಣೆ. ಎಫ್‌ಬಿಐನೊಂದಿಗೆ ಸಮನ್ವಯ ಸಾಧಿಸಿರುವ ಸಿಬಿಐ, ಅಮೆರಿಕದ ಪ್ರಜೆಗಳಿಗೆ ಅಂತರರಾಷ್ಟ್ರೀಯ ಸೈಬರ್ ಅಪರಾಧ ಜಾಲದಿಂದ ಆಗುತ್ತಿದ್ದ 8.5 ಮಿಲಿಯನ್ ಡಾಲರ್ ವಂಚನೆಯನ್ನು ತಪ್ಪಿಸಿದೆ. ಸಿಬಿಐ ಮುಖ್ಯ ಕಚೇರಿಯು ಜಾಲದ ಹಿಂದಿರುವವರನ್ನು ಬಂಧಿಸಿದೆ’ ಎಂದು ಪೋಸ್ಟ್‌ನಲ್ಲಿ ವಿವರಿಸಿದೆ.
ಎಫ್‌ಬಿಐ ನೀಡಿದ ಮಾಹಿತಿಯ ಆಧಾರದ ಮೇಲೆ, ಸಿಬಿಐ ತಂಡ ಕಳೆದ ವಾರ ನೊಯಿಡಾದಲ್ಲಿ ಕಾರ್ಯಾಚರಣೆ ನಡೆಸಿತ್ತು. ಅಮೆರಿಕದ ನಾಗರಿಕರಿಗೆ ವಂಚಿಸುತ್ತಿದ್ದ ಆರು ಶಂಕಿತರನ್ನು ಬಂಧಿಸಲಾಗಿತ್ತು.
ಸಿಬಿಐ ತಂಡ, ದೆಹಲಿ ಮತ್ತು ಕೋಲ್ಕತ್ತದಲ್ಲಿಯೂ ಶೋಧ ನಡೆಸಿದ್ದು, ₹1.88 ಕೋಟಿ ನಗದು, ಮೊಬೈಲ್ ಫೋನ್‌ಗಳೂ, ಲ್ಯಾಪ್‌ಟಾಪ್‌ಗಳೂ, ಪೆನ್‌ಡ್ರೈವ್‌ಗಳು, ಹಾರ್ಡ್‌ಡಿಸ್ಕ್‌ಗಳೂ ಮತ್ತು ಅಪರಾಧಕ್ಕೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ 34 ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.