ADVERTISEMENT

ಕೇಂದ್ರ ಸರ್ಕಾರ ನನ್ನ ಸಲಹೆಯನ್ನು ಸ್ವೀಕರಿಸಿದೆ: ರಾಹುಲ್ ಗಾಂಧಿ ಸಂತಸ

ಪಿಟಿಐ
Published 26 ಡಿಸೆಂಬರ್ 2021, 7:12 IST
Last Updated 26 ಡಿಸೆಂಬರ್ 2021, 7:12 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಿರುವ ಕೇಂದ್ರವು 'ನನ್ನ ಸಲಹೆಯನ್ನು ಸ್ವೀಕರಿಸಿದೆ' ಮತ್ತು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆಗಳು ಮತ್ತು ಬೂಸ್ಟರ್ ಡೋಸ್ ಅನ್ನು ಒದಗಿಸಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.

ದೇಶದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜನವರಿ 3ರಿಂದ ಕೋವಿಡ್ ತಡೆ ಲಸಿಕೆ ಮತ್ತು ದೇಶದ ಮುಂಚೂಣಿ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಘೋಷಿಸಿದ ಬೆನ್ನಲ್ಲೇ, ರಾಹುಲ್ ಈ ಹೇಳಿಕೆ ನೀಡಿದ್ದಾರೆ.

'ಬೂಸ್ಟರ್ ಡೋಸ್ ನೀಡುವ ಕುರಿತಾಗಿ ಕೇಂದ್ರ ಸರ್ಕಾರವು ನನ್ನ ಸಲಹೆಯನ್ನು ಒಪ್ಪಿಕೊಂಡಿದೆ. ಇದು ಒಳ್ಳೆಯ ನಿರ್ಧಾರ. ಕೋವಿಡ್ ಲಸಿಕೆ ಮತ್ತು ಬೂಸ್ಟರ್ ಡೋಸ್‌ಗಳನ್ನು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಲಭ್ಯವಾಗುವಂತೆ ಮಾಡಬೇಕಿದೆ' ಎಂದು #BoosterJab ಮತ್ತು #VaccinateIndia ಎನ್ನುವ ಹ್ಯಾಷ್‌ಟ್ಯಾಗ್‌ಗಳೊಂದಿಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಕಳೆದ ಡಿಸೆಂಬರ್ 22ರಂದು ತಾವೇ ಮಾಡಿದ್ದ ಟ್ವೀಟ್‌ಗೆ ಟ್ಯಾಗ್ ಮಾಡಿದ್ದಾರೆ. 'ದೇಶದ ಜನಸಂಖ್ಯೆಯ ಬಹುಪಾಲು ಮಂದಿ ಕೋವಿಡ್-19 ಲಸಿಕೆಯನ್ನು ಪಡೆದಿಲ್ಲ ಮತ್ತು ಯಾವಾಗ ಬೂಸ್ಟರ್ ಡೋಸ್ ಅನ್ನು ನೀಡಲಾಗುತ್ತದೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.