ADVERTISEMENT

ಬೆಟ್ಟಿಂಗ್‌ ಜಾಹೀರಾತುಗಳಿಂದ ದೂರ ಉಳಿಯುವಂತೆ ಕೇಂದ್ರದ ಸಲಹೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2022, 14:13 IST
Last Updated 3 ಅಕ್ಟೋಬರ್ 2022, 14:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ನೆಪದಲ್ಲಿ ವಂಚನೆಗಳು ಹೆಚ್ಚುತ್ತಿವೆ. ಇದರ ಬೆನ್ನಲ್ಲೇ, ವೆಬ್‌ಸೈಟ್‌, ಟಿವಿ ಚಾನೆಲ್‌, ಒಟಿಟಿ ಮತ್ತು ಖಾಸಗಿ ವಾಹಿನಿಗಳು ಹೊರಗಿನ ಬೆಟ್ಟಿಂಗ್‌ ತಾಣಗಳ ಜಾಹೀರಾತುಗಳಿಂದ ದೂರ ಉಳಿಯುವಂತೆ ಕೇಂದ್ರ ಸರ್ಕಾರ ಸೋಮವಾರ ಸಲಹೆ ನೀಡಿದೆ.

ಖಾಸಗಿ ವಾಹಿನಿಗಳು ಆನ್‌ಲೈನ್‌ ಬೆಟ್ಟಿಂಗ್‌ ವೇದಿಕೆಗಳು ಮತ್ತು ಅವುಗಳ ಸಂಬಂಧಿ ವೆಬ್‌ಸೈಟ್‌ಗಳು ಅಥವಾ ಅಂತಹ ಯಾವುದೇ ಉತ್ಪನ್ನ ಉತ್ತೇಜಿಸುವ ಜಾಹೀರಾತುಗಳಿಂದ ದೂರ ಉಳಿಯಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣೆ ಹೇಳಿದೆ.

ಸಲಹೆಯನ್ನು ಉಲ್ಲಂಘಿಸಿದರೆ ಸಂಬಂಧಿತ ಕಾನೂನಿನ ಅನ್ವಯ ದಂಡ ವಿಧಿಸುವುದಾಗಿಯೂ ಸಚಿವಾಲಯ ವಾಹಿನಿಗಳಿಗೆ ಎಚ್ಚರಿಕೆ ನೀಡಿದೆ.

ADVERTISEMENT

ಡಿಜಿಟಲ್‌ ಮಾಧ್ಯಮ ಹಾಗೂ ಒಟಿಟಿಗೆ ಪ್ರತ್ಯೇಕ ಪ್ರಕಟಣೆ ಹೊರಡಿಸಿರುವ ಸಚಿವಾಲಯ, ಭಾರತೀಯ ಗ್ರಾಹಕರಿಗೆ ಅಂತಹ ಜಾಹೀರಾತುಗಳನ್ನು ಪ್ರದರ್ಶಿಸದಂತೆ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.