ADVERTISEMENT

ಪ್ರತಿ ವರ್ಷ ನೈಸರ್ಗಿಕ ವಿಪತ್ತು: ಹಿಮಾಚಲದ ಶೇ 1ರಷ್ಟು ಜನರಿಗೆ ರಕ್ಷಣಾ ತರಬೇತಿ

ಪಿಟಿಐ
Published 3 ಜುಲೈ 2025, 2:40 IST
Last Updated 3 ಜುಲೈ 2025, 2:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೃಪೆ: Gemini AI

ಶಿಮ್ಲಾ: ಪ್ರತಿ ವರ್ಷವೂ ಎದುರಾಗುತ್ತಿರುವ ಪ್ರಾಕೃತಿಕ ವಿಪತ್ತಿನ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗಲು ಹಿಮಾಚಲ ಪ್ರದೇಶದ ಶೇ 1 ರಷ್ಟು ಜನರಿಗೆ, ಅಂದರೆ 70,000ಕ್ಕೂ ಅಧಿಕ ಸ್ವಯಂಸೇವಕರಿಗೆ ರಕ್ಷಣಾ ತರಬೇತಿ ನೀಡಲಾಗುವುದು ಎಂದು ವಿಪತ್ತ ನಿರ್ವಹಣಾ ಪ್ರಾಧಿಕಾರದ ನಿರ್ದೇಶಕ ಡಿ.ಸಿ. ರಾಣಾ ಹೇಳಿದ್ದಾರೆ.

ADVERTISEMENT

ಮಾಧ್ಯಮದವರೊಂದಿಗೆ ಮಾತನಾಡಿರುವ ರಾಣಾ, ಕೇಂದ್ರ ಸರ್ಕಾರವು ಇಡೀ ಹಿಮಾಚಲ ಪ್ರದೇಶವನ್ನು 'ನಾಗರಿಕ ರಕ್ಷಣಾ ಪಟ್ಟಣ' ಎಂದು ಘೋಷಿಸಿದ್ದು, ಅದರ ಅಡಿಯಲ್ಲಿ ಶೇ 1ರಷ್ಟು ಜನರಿಗೆ ನಾಗರಿಕ ರಕ್ಷಣಾ ತರಬೇತಿಯನ್ನು ನೀಡಬೇಕು ಎಂದು ತಿಳಿಸಿದ್ದಾರೆ.

'ನಾಗರಿಕ ರಕ್ಷಣಾ ಪಟ್ಟಣ' ಎಂಬುದು ನಾಗರಿಕ ರಕ್ಷಣಾ ಕ್ರಮಗಳನ್ನು ಸಂಘಟಿಸುವ ಮತ್ತು ಕಾರ್ಯಗತಗೊಳಿಸುವ ಉದ್ದೇಶಕ್ಕಾಗಿ ವರ್ಗೀಕರಿಸಲಾದ ಪ್ರದೇಶವಾಗಿದೆ.

ಹಿಮಾಚಲ ಪ್ರದೇಶವು ಪ್ರತಿ ವರ್ಷವೂ ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿದ್ದು, ಭಾರಿ ಪ್ರಮಾಣದ ನ‌ಷ್ಟ ಅನುಭವಿಸುತ್ತಿದೆ. ತರಬೇತಿ ಪಡೆದ ಸ್ವಯಂ ಸೇವಕರು, ರಾಷ್ಟ್ರೀಯ ಅಥವಾ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಸ್ಥಳಕ್ಕೆ ತಲುಪುವ ಮುನ್ನವೇ ನಾಗರಿಕರ ನೆರವಿಗೆ ಧಾವಿಸಲಿದ್ದಾರೆ.

ವಿಳಂಬ ಮಾಡದೆ ಪರಿಹಾರ ಕಾರ್ಯಾಚರಣೆ ಆರಂಭಿಸಲು ಹಾಗೂ ಹೆಚ್ಚಿನ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ವತಿಯಿಂದ 3,600 ಪಂಚಾಯತಿಗಳ ವ್ಯಾಪ್ತಿಯಲ್ಲಿ ಈಗಾಗಲೇ 28,000 ಮಂದಿಗೆ ತರಬೇತಿ ನೀಡಲಾಗಿದೆ. ಇವರಿಗೆಲ್ಲ ರಕ್ಷಣಾ ಮತ್ತು ಸಂಶೋಧನಾ ಕೇಂದ್ರದಲ್ಲಿಯೂ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಮುಂಗಾರು ಋತು ಆರಂಭವಾದಾಗಿನಿಂದ, ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 34 ಮಂದಿ ಮೃತಪಟ್ಟಿದ್ದಾರೆ. 40ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.