ADVERTISEMENT

ಚೀನಾ ಆಕ್ರಮಣದ ಕುರಿತು ಐದು ಪ್ರಮುಖ ಸಂಗತಿ ಹೊರಹಾಕಿದ ಕಾಂಗ್ರೆಸ್‌

ಏಜೆನ್ಸೀಸ್
Published 19 ಜುಲೈ 2020, 14:51 IST
Last Updated 19 ಜುಲೈ 2020, 14:51 IST
ಗಡಿಯಲ್ಲಿ ಆಗಿರುವ ಬದಲಾವಣೆಗಳ ಕುರಿತ ನಕ್ಷೆ ತೋರಿಸುತ್ತಿರುವ  ರಣದೀಪ್‌ ಸಿಂಗ್‌ ಸುರ್ಜೆವಾಲ
ಗಡಿಯಲ್ಲಿ ಆಗಿರುವ ಬದಲಾವಣೆಗಳ ಕುರಿತ ನಕ್ಷೆ ತೋರಿಸುತ್ತಿರುವ ರಣದೀಪ್‌ ಸಿಂಗ್‌ ಸುರ್ಜೆವಾಲ    

ನವದೆಹಲಿ: ಲಡಾಖ್‌ನಲ್ಲಿ ಚೀನಾ ಆಕ್ರಮಣದ ಕುರಿತು ಕಾಂಗ್ರೆಸ್‌ ಐದು ಪ್ರಮುಖ ವಿಷಯಗಳನ್ನು ಭಾನುವಾರ ಹೊರ ಹಾಕಿದೆ.

ಉಪಗ್ರಹ ಚಿತ್ರ, ನಿಯತಕಾಲಿಕೆಗಳು, ಹಲವು ರಕ್ಷಣಾ ತಜ್ಞರು ಸೇರಿ ಈ ಐದು ಸಂಗತಿಗಳನ್ನು ಗುರುತಿಸಿರುವುದಾಗಿ ಕಾಂಗ್ರೆಸ್‌ನ ವಕ್ತಾರ ರಣದೀಪ್‌ ಸುರ್ಜೆವಾಲ ಹೇಳಿದ್ದಾರೆ.

ಏನದು ಐದು ಸಂಗತಿಗಳು?

ADVERTISEMENT
  1. ಚೀನಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. ಪೆಪ್ಸಾಂಗ್‌ ಬಯಲು ಪ್ರದೇಶ, ದೌಲತ್‌ ಬೇಕ್‌ ಓಲ್ಡಿಯನ್ನು ವಶಕ್ಕೆ ಪಡೆಯುತ್ತಾ ಹೋಗುತ್ತಿದೆ. ಅಲ್ಲದೆ, ಅಲ್ಲೆಲ್ಲ ಮಿಲಿಟರಿ ನಿರ್ಮಿತಿಗಳನ್ನು ಕೈಗೊಳ್ಳುತ್ತಿದೆ
  2. ಭಾರತದ ಶಶಸ್ತ್ರ ಪಡೆಗಳ ಗಸ್ತಿಗೆ ಚೀನಾ ಅವಕಾಶ ನೀಡುತ್ತಿಲ್ಲ. ಪ್ಯಾಟ್ರೋಲಿಂಗ್‌ ಪಾಯಿಂಟ್‌ 10 ರಿಂದ 13ರ ವರೆಗೆ ಗಸ್ತು ಸಾಧ್ಯವಾಗುತ್ತಿಲ್ಲ.
  3. ಫಿಂಗರ್‌ 4–8ರ ನಡುವೆ ಚೀನಾ 8 ಕಿ.ಮೀ ಆಕ್ರಮಿಸಿಕೊಂಡಿದೆ. ಅಲ್ಲದೆ, 3 ಸಾವಿರ ಚೀನಾ ಸೈನಿಕರು ನಮ್ಮ ನೆಲದಲ್ಲಿ ಇದ್ದಾರೆ.
  4. ಗಡಿಯಲ್ಲಿ 2020ರ ಮೇ ತಿಂಗಳಿಗೂ ಮೊದಲಿದ್ದ ಸನ್ನಿವೇಶವನ್ನು ಪುನರ್‌ಸ್ಥಾಪಿಸಲು ಚೀನಾ ಒಪ್ಪುತ್ತಿಲ್ಲ. ಯಥಾಸ್ಥಿತಿಗೆ ಅದು ಅಡ್ಡಿಯಾಗುತ್ತಲೇ ಇದೆ.
  5. ಗಡಿಯಲ್ಲಿರುವ ನಗರಿ ಕುನ್ಶಾ ನಾಗರಿಕ ವಿಮಾನ ನಿಲ್ದಾಣವನ್ನು ಅನ್ನು ಚೀನಾ ಮಿಲಿಟರಿ ವಾಯುನೆಲೆಯಾಗಿ ಪರಿವರ್ತಿಸಿದೆ. ಇದು ನಮ್ಮ ಪ್ರಾದೇಶಿಕ ಸಮಗ್ರತೆಗೆ ಅತಿ ದೊಡ್ಡ ಬೆದರಿಕೆಯಾಗಿದೆ. ಅಲ್ಲದೆ, ಗಡಿಯಲ್ಲಿ 20 ಸಾವಿರ ಸೈನಿಕರನ್ನು ಚೀನಾ ನಿಯೋಜಿಸಿದೆ.

ಇದು ಕಾಂಗ್ರೆಸ್‌ ಪಟ್ಟಿ ಮಾಡಿರುವ ಸಂಗತಿಗಳನ್ನು ಸುರ್ಜೆವಾಲ ಭಾನುವಾರ ಮಾಧ್ಯಮಗಳಿಗೆ ತಿಳಿಸಿದರು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಕೆಲವು ನಕ್ಷೆಗಳನ್ನೂ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.