ADVERTISEMENT

ಡಿಲೀಟ್ ಆದ ಕಾಂಗ್ರೆಸ್‌ನ ಯೂಟ್ಯೂಬ್ ಚಾನೆಲ್: ಕಾರಣ ಅಸ್ಪಷ್ಟ

ಪಿಟಿಐ
Published 24 ಆಗಸ್ಟ್ 2022, 14:30 IST
Last Updated 24 ಆಗಸ್ಟ್ 2022, 14:30 IST
   

ನವದೆಹಲಿ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ (ಐಎನ್‌ಸಿ) ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್ ಡಿಲೀಟ್ ಆಗಿರುವ ಬಗ್ಗೆ ವರದಿಯಾಗಿದೆ.

ಇದನ್ನು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಟೀಮ್ದೃಢೀಕರಿಸಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ.

ತಾಂತ್ರಿಕ ದೋಷ ಅಥವಾ ಇನ್ಯಾವುದೇ ಕಾರಣದಿಂದ ಯೂಟ್ಯೂಬ್ ಚಾನೆಲ್ ಡಿಲೀಟ್ ಆಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ.

ಗೂಗಲ್, ಯೂಟ್ಯೂಬ್ ತಂಡದವರೊಂದಿಗೆ ಕಾಂಗ್ರೆಸ್ ಸಂಪರ್ಕದಲ್ಲಿದ್ದು, ಆದಷ್ಟು ಬೇಗನೇ ದೋಷ ಬಗೆಹರಿಯುವ ನಿರೀಕ್ಷೆಯಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.