ADVERTISEMENT

ವೈರಲ್ ವಿಡಿಯೊ: ಭಾರತೀಯ ಸೇನೆಯ ಯೋಧನನ್ನು ಥಳಿಸಿದ ಜಾರ್ಖಂಡ್ ಪೊಲೀಸರು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಸೆಪ್ಟೆಂಬರ್ 2021, 13:25 IST
Last Updated 2 ಸೆಪ್ಟೆಂಬರ್ 2021, 13:25 IST
ಯೋಧ ಪವನ್‌ಕುಮಾರ್‌ ಅವರನ್ನು ಜಾರ್ಖಂಡ್ ಪೊಲೀಸರು ಥಳಿಸುತ್ತಿರುವುದು
ಯೋಧ ಪವನ್‌ಕುಮಾರ್‌ ಅವರನ್ನು ಜಾರ್ಖಂಡ್ ಪೊಲೀಸರು ಥಳಿಸುತ್ತಿರುವುದು   

ಬೆಂಗಳೂರು: ಮಾಸ್ಕ್ ಧರಿಸಿಲ್ಲ ಎಂದು ಆರೋಪಿಸಿ ಭಾರತೀಯ ಸೇನೆಯ ಯೋಧರೊಬ್ಬರನ್ನು ಜಾರ್ಖಂಡ್ ಪೊಲೀಸರು ಅಮಾನವೀಯವಾಗಿ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಜಾರ್ಖಂಡ್‌ನ ಚಾತ್ರಾ ಜಿಲ್ಲೆಯ ಮಹೂರ್‌ಹಂದ್‌ನ ಕರ್ಮಾ ಚೌಕ್‌ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದ್ದು, ಥಳಿತಕ್ಕೊಳಗಾದ ಯೋಧನನ್ನು ಪವನ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ.

‘ಇನ್ನು ಈ ಘಟನೆಗೆ ಸಬಂಧಪಟ್ಟಂತೆ ಮೂವರುಪೊಲೀಸ್ ಸಿಬ್ಬಂಧಿಯನ್ನು ಅಮಾನತು ಮಾಡಲಾಗಿದೆ ಎಂದು ಚಾತ್ರಾ ಜಿಲ್ಲಾ ಎಸ್‌ಪಿ ರಾಕೇಶ್‌ ರಂಜನ್ ತಿಳಿಸಿದ್ದಾರೆ. ಮಾಸ್ಕ್‌ ಹಾಕದ್ದನ್ನು ನಮ್ಮ ಪೊಲೀಸರು ಪ್ರಶ್ನಿಸಿದ್ದಾಗ, ಅವರ ಮೇಲೆ ಯೋಧ ಹಲ್ಲೆ ಮಾಡಿದ್ದ. ಬಳಿಕ ನಮ್ಮ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ರಾಕೇಶ್ ಹೇಳಿದ್ದಾರೆ‘ ಎಂದು ಓಪಿಇಂಡಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ವೈರಲ್ ಆದ ವಿಡಿಯೊವನ್ನು ಟ್ವಿಟರ್‌ನಲ್ಲಿ ಪತ್ರಕರ್ತ ಮುಕೇಶ್ ರಂಜನ್ ಎನ್ನುವರು ಹಂಚಿಕೊಂಡಿದ್ದಾರೆ. ಪವನ್ ಕುಮಾರ್ ಯಾದವ್ ಅವರು ಜಾರ್ಖಂಡ್‌ನ ಹಜಾರಿಬಾಗ್‌ ಮೂಲದವರಾಗಿದ್ದು, ಜೋದ್‌ಪುರ್‌ದಲ್ಲಿ ಜಿಡಿಯಾಗಿ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.