ADVERTISEMENT

ಎಟಿಎಂ ಬೂತ್‌ನಿಂದ ಮೂವರು ಭಾರತೀಯ ಸೇನಾ ಸಿಬ್ಬಂದಿಗೆ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 16:40 IST
Last Updated 23 ಏಪ್ರಿಲ್ 2020, 16:40 IST
   

ಬರೋಡಾ: ಗುಜರಾತಿನ ಬರೋಡಾದಲ್ಲಿ ಮೂವರು ಭಾರತೀಯ ಸೇನಾ ಸಿಬ್ಬಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.

ಈ ಮೂವರು ಎಟಿಎಂ ಬೂತ್‌ನಲ್ಲಿ ಒಂದೇ ದಿನ ಹಣ ತೆಗೆದುಕೊಂಡಿದ್ದು, ಅಲ್ಲಿಂದಲೇ ಕೊರೊನಾ ಸೋಂಕು ಹರಡಿರಬಹುದೆಂದು ಆರಂಭಿಕ ಪರೀಕ್ಷೆಯಿಂದ ತಿಳಿದುಬಂದಿದೆ.

ಕೊರೊನಾ ಸೋಂಕು ದೃಢಪಟ್ಟಿರುವ ಈ ಮೂವರ ಸಂಪರ್ಕದಲ್ಲಿದ್ದ ಸುಮಾರು 28 ಜನರನ್ನು ಕ್ವಾರೆಂಟೈನ್‌ ಅಲ್ಲಿ ಇಡಲಾಗಿದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ADVERTISEMENT

ದೇಶದಾದ್ಯಂತ ದಾಖಲಾಗಿರುವ ಒಟ್ಟು 21,393 ಕೋವಿಡ್‌–19 ಪ್ರಕರಣಗಳ ಪೈಕಿ 4,257 ಮಂದಿ ಗುಣಮುಖರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ 16,454 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 681 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.