ಸಿಪಿಐ (ಎಂ)
ಸಿಪಿಐ (ಎಂ)
ಠಾಣೆ: ಕೋಮುವಾದ ವಿರುದ್ಧ ಹೋರಾಟ ಹಾಗೂ ಕೃಷಿ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ವಿರೋಧ ಸೇರಿದಂತೆ ಹಲವು ನಿರ್ಣಯಗಳನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) 24ನೇ ಮಹಾರಾಷ್ಟ್ರ ರಾಜ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗಿದೆ.
ಪರ್ಭಣಿ ಜಿಲ್ಲೆಯ ಸೆಲುನಲ್ಲಿ ನಡೆದ ಸಮ್ಮೇಳನ ಸೋಮವಾರ ಕೊನೆಗೊಂಡಿತು. ಈ ಕುರಿತು ಸಿಪಿಐ (ಎಂ) ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
‘ಸಮ್ಮೇಳನದಲ್ಲಿ ಒಟ್ಟು ಎಂಟು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಕಾರ್ಪೊರೇಟ್ ಕಂಪನಿಗಳ ಪರ ನೀತಿಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಹಾಗೂ ಪ್ಯಾಲೆಸ್ಟೀನ್ ವಿರುದ್ಧ ನರಮೇಧ ಯುದ್ಧವನ್ನು ಖಂಡಿಸಲಾಯಿತು’ ಎಂದು ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಅಶೋಕ ಧವಳೆ ಹೇಳಿದ್ದಾರೆ.
ಡಾ. ಅಜಿತ್ ನವಳೆ ಅವರನ್ನು ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಕೋಮುವಾದ ವಿರುದ್ಧದ ಹೋರಾಟ, ಕೃಷಿ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಹಾಗೂ ಕಾರ್ಪೊರೇಟ್‌ಗಳ ಪ್ರವೇಶಕ್ಕೆ ಪ್ರತಿರೋಧದಂತ ನಿರ್ಣಯಗಳನ್ನು ಅಂಗೀಕರಿಸಲು ಒಮ್ಮತ ವ್ಯಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.