ADVERTISEMENT

ನಟಿ ದೀಪಿಕಾ ಪಡುಕೋಣೆ ಈಗ ಮಾನಸಿಕ ಆರೋಗ್ಯದ ರಾಯಭಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2025, 13:13 IST
Last Updated 11 ಅಕ್ಟೋಬರ್ 2025, 13:13 IST
<div class="paragraphs"><p>ಚಿತ್ರ ಕೃಪೆ:&nbsp;<a href="https://x.com/theskindoctor13">@theskindoctor13</a></p></div>

ಚಿತ್ರ ಕೃಪೆ: @theskindoctor13

   

ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೇಶದ ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ನೇಮಿಸಿದೆ.

ದೇಶದಾದ್ಯಂತ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಕಳಂಕವನ್ನು ಕಡಿಮೆ ಮಾಡುವುದು ಇದರ ಮುಖ್ಯ ಗುರಿಯಾಗಿದೆ.

ADVERTISEMENT

ಇತ್ತಿಚೀನ ದಿನಗಳಲ್ಲಿ ದೇಶದಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚಾಗಿದೆ. ಮಾಹಿತಿ, ಶಿಕ್ಷಣ ಹಾಗೂ ಮುಕ್ತ ಸಂಭಾಷಣೆಗಳನ್ನು ನಡೆಸಲು ರಾಯಭಾರಿಯಾಗಿ ದೀಪಿಕಾ ಪಡುಕೋಣೆ ಸಹಕರಿಸಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೀಪಿಕಾ ಪಡುಕೋಣೆ, ‘ವಿಶ್ವ ಮಾನಸಿಕ ಆರೋಗ್ಯ ದಿನದಂದು, ದೇಶದ ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ನೇಮಕಗೊಂಡಿರುವುದು ನನಗೆ ಹೆಮ್ಮೆ ಇದೆ. ದೇಶದ ಜನರ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಚಿವಾಲಯ ಅರ್ಥಪೂರ್ಣ ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.

ಆರೋಗ್ಯಕರ ಭಾರತವನ್ನು ನಿರ್ಮಿಸಲು ನಾನು ಸಹಕರಿಸುತ್ತೇನೆ. ಮಾನಸಿಕ ಆರೋಗ್ಯ ಚೌಕಟ್ಟನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ (ಇನ್‌ಸ್ಟಾಗ್ರಾಮ್‌) ಬರೆದುಕೊಂಡಿದ್ದಾರೆ.

ಹಿಂದೊಮ್ಮೆ ದೀಪಿಕಾ ಪಡುಕೋಣೆ ಕೂಡ ಮಾನಸಿಕ ಖಿನ್ನತೆ ಒಳಗಾಗಿದ್ದರು ಎಂಬ ವರದಿಗಳಿವೆ. ಆದರೆ ಅವರು ಆ ಸಮಸ್ಯೆಯಿಂದ ಹೊರ ಬಂದು ತಮ್ಮ ಸಿನಿ ಪ್ರಯಾಣದ ಸಾಧನೆಯಲ್ಲಿ –ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.