ADVERTISEMENT

ವಿದೇಶಕ್ಕೆ ಹೋಗುವವರಿಗಾಗಿ ದೆಹಲಿ ಸರ್ಕಾರದಿಂದ ವಿಶೇಷ ಲಸಿಕಾ ಕೇಂದ್ರ

ಪಿಟಿಐ
Published 14 ಜೂನ್ 2021, 14:15 IST
Last Updated 14 ಜೂನ್ 2021, 14:15 IST
ನವದೆಹಲಿಯಲ್ಲಿ ವಿದೇಶಕ್ಕೆ ಉನ್ನತ ಶಿಕ್ಷಣಕ್ಕಾಗಿ ಪ್ರಯಾಣಿಸುವವರಿಗಾಗಿ ಆರಂಭಿಸಿರುವ ವಿಶೇಷ ಲಸಿಕಾ ಕೇಂದ್ರದಲ್ಲಿ ಸೋಮವಾರ ವಿದ್ಯಾರ್ಥಿನಿಯೊಬ್ಬರು ಕೋವಿಡ್‌ ಲಸಿಕೆ ಹಾಕಿಸಿಕೊಂಡರು (ಪಿಟಿಐ ಚಿತ್ರ)
ನವದೆಹಲಿಯಲ್ಲಿ ವಿದೇಶಕ್ಕೆ ಉನ್ನತ ಶಿಕ್ಷಣಕ್ಕಾಗಿ ಪ್ರಯಾಣಿಸುವವರಿಗಾಗಿ ಆರಂಭಿಸಿರುವ ವಿಶೇಷ ಲಸಿಕಾ ಕೇಂದ್ರದಲ್ಲಿ ಸೋಮವಾರ ವಿದ್ಯಾರ್ಥಿನಿಯೊಬ್ಬರು ಕೋವಿಡ್‌ ಲಸಿಕೆ ಹಾಕಿಸಿಕೊಂಡರು (ಪಿಟಿಐ ಚಿತ್ರ)   

ನವದೆಹಲಿ: ಶಾಲಾ ವಿದ್ಯಾರ್ಥಿಗಳು, ಅಥ್ಲೀಟ್‌ಗಳು ಹಾಗೂ ಉದ್ಯೋಗ, ಶಿಕ್ಷಣ ನಿಮಿತ್ತ ವಿದೇಶಗಳಿಗೆ ಪ್ರಯಾಣಿಸುವವರಿಗಾಗಿ ಕೋವಿಡ್‌ ಲಸಿಕೆ ನೀಡಲು ದೆಹಲಿ ಸರ್ಕಾರ ಪ್ರತ್ಯೇಕ ಕೋವಿಡ್‌ ಲಸಿಕಾ ಕೇಂದ್ರವನ್ನು ಆರಂಭಿಸಿದೆ.

ನಗರದಮಂದಿರ ಮಾರ್ಗದಲ್ಲಿರುವ ನವಯುಗ್ ಶಾಲೆಯಲ್ಲಿ ತೆರೆದಿರುವ ಈ ಕೇಂದ್ರವನ್ನುದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸೋಮವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಸಿಸೋಡಿಯಾ, ಈ ವಿಭಾಗಗಳ ಅಡಿಯಲ್ಲಿ ಬರುವ ಜನರು ತಮ್ಮ ಮೊದಲ ಶಾಟ್‌ನ ದಿನಾಂಕದಿಂದ 28-84 ದಿನಗಳ ಅಂತರದ ನಂತರ ವಿಶೇಷ ನಿಬಂಧನೆಗಳ ಅಡಿಯಲ್ಲಿ ತಮ್ಮ ಎರಡನೇ ಲಸಿಕೆ ಪ್ರಮಾಣವನ್ನು ಶಿಬಿರದಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಈ ಮೂರು ವಿಭಾಗಗಳಲ್ಲಿ ಗುರುತಿಸಿಕೊಂಡವರು ಮೊದಲ ಡೋಸ್ ಪಡೆದು 28–84 ದಿನಗಳ ಅಂತರದಲ್ಲಿ ತಮ್ಮ ಎರಡನೇ ಡೋಸ್ ಲಸಿಕೆಯನ್ನು ಈ ಕೇಂದ್ರದಲ್ಲಿ ಪಡೆಯಲು ನೆರವಾಗಲಿದೆ. ವಿಶೇಷ ಲಸಿಕಾ ಕೇಂದ್ರದ ಉದ್ದೇಶವು ವಿದೇಶಕ್ಕೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದಾಗಿದೆ ಎಂದು ಸಿಸೋಡಿಯಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.