ಸಾಂದರ್ಭಿಕ ಚಿತ್ರ
ನವದೆಹಲಿ: ದೆಹಲಿ ಹೈಕೋರ್ಟ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದರಿಂದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಆತಂಕದ ವಾತಾವರಣ ಸೃಷ್ಟಿಯಾಯಿತು.
ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳು ಪ್ರಕರಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಪೀಠದಿಂದ ಮೇಲೆದ್ದರು. ತಕ್ಷಣವೇ ನ್ಯಾಯಾಲಯದ ಆವರಣವನ್ನು ತೆರವುಗೊಳಿಸಲಾಯಿತು.
ಮೂಲಗಳ ಪ್ರಕಾರ ಬೆಳಿಗ್ಗೆ 8.39ಕ್ಕೆ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ಇಮೇಲ್ ಬಂದಿದೆ. ಈ ಮಾಹಿತಿಯನ್ನು ಕೆಲ ನ್ಯಾಯಮೂರ್ತಿಗಳಿಗೆ ನೀಡಲಾಯಿತು.
ಕೆಲ ನ್ಯಾಯಮೂರ್ತಿಗಳು 11.35ಕ್ಕೆ ಕಲಾಪವನ್ನು ಅರ್ಧಕ್ಕೆ ಬಿಟ್ಟು ಮೇಲೆದ್ದರು. ಇನ್ನೂ ಕೆಲವರು ಮಧ್ಯಾಹ್ನ 12ರವರೆಗೂ ಕಲಾಪ ಪೂರ್ಣಗೊಳಿಸಿ ಮೇಲೆದ್ದರು ಎಂದು ಮೂಲಗಳು ತಿಳಿಸಿವೆ.
ನ್ಯಾಯಾಲಯದ ಆವರಣದಲ್ಲಿದ್ದವರನ್ನು ಹೊರಗೆ ಹೋಗುವಂತೆ ತಿಳಿಸಲಾಯಿತು. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಂಬ್ ಶೋಧ ಮುಂದುವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.