ADVERTISEMENT

ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರ: ಏರ್ ಪ್ಯೂರಿಫೈರ್‌ಗೆ ಹೆಚ್ಚಿದ ಬೇಡಿಕೆ

ಪಿಟಿಐ
Published 29 ಅಕ್ಟೋಬರ್ 2025, 10:52 IST
Last Updated 29 ಅಕ್ಟೋಬರ್ 2025, 10:52 IST
<div class="paragraphs"><p>ದೆಹಲಿ ನಗರದಲ್ಲಿ ಹೆಚ್ಚಿದ ವಾಯುಮಾಲಿನ್ಯ</p></div>

ದೆಹಲಿ ನಗರದಲ್ಲಿ ಹೆಚ್ಚಿದ ವಾಯುಮಾಲಿನ್ಯ

   

ಪಿಟಿಐ ಚಿತ್ರ

ನವದೆಹಲಿ: ದೀಪಾವಳಿ ಹಬ್ಬದ ಬಳಿಕ ದೆಹಲಿ–ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದ್ದು, ಏರ್ ಪ್ಯೂರಿಫೈರ್‌ ಖರೀದಿಸುವವರ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ.

ADVERTISEMENT

ದೆಹಲಿಯಲ್ಲಿ ಬುಧವಾರ ಗಾಳಿಯ ಗುಣಮಟ್ಟ ತುಸು ಸುಧಾರಿಸಿದರೂ ಕಳಪೆ ಮಟ್ಟದಲ್ಲೇ ಮುಂದುವರಿದಿದ್ದು ಎಕ್ಯೂಐ ಸೂಚ್ಯಂಕ 273ಕ್ಕೆ ತಲುಪಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. 

ಸೋಮವಾರ‌ ನಗರದಲ್ಲಿ ಎಕ್ಯೂಐ ಸೂಚ್ಯಂಕ 301ಕ್ಕೆ ಹಾಗೂ ಮಂಗಳವಾರ 294 ಕ್ಕೆ ತಲುಪುವ ಮೂಲಕ ಗಾಳಿಯ ಗುಣಮಟ್ಟ ಅತಿ ಕಳಪೆ ಮಟ್ಟಕ್ಕೆ ಕುಸಿದಿತ್ತು.

ಯುರೇಕಾ ಫೋರ್ಬ್ಸ್‌ನ ಅಧಿಕಾರಿಯೊಬ್ಬರು ಪಿಟಿಐ ಜತೆ ಮಾತನಾಡಿ, ‘ದೀಪಾವಳಿ ಇರುವ ಕಾರಣಕ್ಕೆ ಅಕ್ಟೋಬರ್‌ನಲ್ಲಿ ಏರ್‌ ಪ್ಯೂರಿಫೈರ್‌ಗೆ ಬೇಡಿಕೆ ಹೆಚ್ಚಳವಾಗಿದೆ. ನಗರದಲ್ಲಿನ ವಾಯುಮಾಲಿನ್ಯ ಹೆಚ್ಚಳ ಮತ್ತು ಜನರಲ್ಲಿ ಜಾಗೃತಿ ಮೂಡಿರುವುದರಿಂದ ಏರ್ ಪ್ಯೂರಿಫೈರ್‌ ಬಳಕೆಯತ್ತ ಜನ ಒಲವು ತೋರುತ್ತಿದ್ದಾರೆ’ ಎಂದರು.

ಕೆನ್ಟ್‌ ಆರ್‌ಒನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್‌ ಗುಪ್ತಾ ಮಾತನಾಡಿ, ‘ದೆಹಲಿ ಉತ್ತರ ಭಾಗದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಜನರು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಏರ್ ಪ್ಯೂರಿಫೈರ್‌ ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಮಾರಾಟ ಶೇ 30–40ರಷ್ಟು ಏರಿಕೆಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.