ADVERTISEMENT

ದೆಹಲಿಯ ಗಾಳಿಯ ಗುಣಮಟ್ಟ ಸುಧಾರಣೆ: 'ಅತ್ಯಂತ ಕಳಪೆ'ಯಿಂದ 'ಕಳಪೆ' ಮಟ್ಟಕ್ಕೆ

ಪಿಟಿಐ
Published 4 ಡಿಸೆಂಬರ್ 2024, 5:49 IST
Last Updated 4 ಡಿಸೆಂಬರ್ 2024, 5:49 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಉತ್ತಮ ಹವಾಮಾನ ಪರಿಸ್ಥಿತಿಯಿಂದಾಗಿ ಗಾಳಿಯ ಗುಣಮಟ್ಟ ತುಸು ಸುಧಾರಿಸಿದೆ. ಆದಾಗ್ಯೂ, ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 'ಕಳಪೆ' ಮಟ್ಟದಲ್ಲೇ ಇದೆ ಎಂದು ವರದಿಯಾಗಿದೆ.

ಇಂದು (ಬುಧವಾರ) ಬೆಳಿಗ್ಗೆ 8ರ ಹೊತ್ತಿಗೆ ದೆಹಲಿ ಎಕ್ಯೂಐ 211ರಷ್ಟು ದಾಖಲಾಗಿದೆ. ಇದು ಮಂಗಳವಾರ ಬೆಳಿಗ್ಗೆ 268ರಷ್ಟಿತ್ತು. ಸೋಮವಾರ ಬೆಳಿಗ್ಗೆ 273ರಷ್ಟು ಹಾಗೂ ಭಾನುವಾರ ಬೆಳಿಗ್ಗೆ 285ರಷ್ಟು ದಾಖಲಾಗಿತ್ತು ಎಂಬುದು ಕೇಂದ್ರಿಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಅಂಕಿ–ಅಂಶಗಳಿಂದ ತಿಳಿದುಬಂದಿದೆ.

ADVERTISEMENT

ಇದರೊಂದಿಗೆ ಸತತ ನಾಲ್ಕು ದಿನಗಳಿಂದ ವಾಯು ಗುಣಮಟ್ಟವು ಸುಧಾರಿಸಿದಂತಾಗಿದೆ. ದೆಹಲಿಯಲ್ಲಿರುವ 39 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 15ರಲ್ಲಿ ಎ‌ಕ್ಯೂಐ ಪ‍್ರಮಾಣವು ಸುಧಾರಣೆ ಕಂಡಿದೆ. ಇನ್ನುಳಿದ ಕೇಂದ್ರಗಳಲ್ಲಿ ಎ‌ಕ್ಯೂಐ ಪ‍್ರಮಾಣವು ಕಳಪೆ ಇದೆ ಎಂದು ಉಲ್ಲೇಖಿಸಲಾಗಿದೆ.

ದೆಹಲಿಯಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಎಕ್ಯೂಐ ಮಟ್ಟವು ಸೊನ್ನೆಯಿಂದ 50 ರಷ್ಟಿದ್ದರೆ 'ಉತ್ತಮ' ಎಂದು, 51ರಿಂದ 100 ರಷ್ಟಿದ್ದರೆ 'ಸಮಾಧಾನಕರ', 101 ರಿಂದ 200 ರಷ್ಟಿದ್ದರೆ 'ಸಾಧಾರಣ', 201 ರಿಂದ 300 ರಷ್ಟಿದ್ದರೆ 'ಕಳಪೆ' ಹಾಗೂ 301 ರಿಂದ 400 ರಷ್ಟಿದ್ದರೆ 'ಅತ್ಯಂತ ಕಳಪೆ' ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ 'ತೀವ್ರ ಕಳಪೆ' ಹಾಗೂ 450ಕ್ಕಿಂತ ಹೆಚ್ಚಾದರೆ 'ಅತ್ಯಂತ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.