ಮುಜಾಫರ್ ನಗರ: ವರದಕ್ಷಿಣೆಗಾಗಿ 28 ವರ್ಷದ ಮಹಿಳೆಯನ್ನು ಅತ್ತೆ–ಮಾವಂದಿರು ಥಳಿಸಿ ಕೊಂದಿರುವ ಘಟನೆ ಇಲ್ಲಿನ ಫುಲತ್ ಗ್ರಾಮದಲ್ಲಿ ನಡೆದಿದೆ ಎಂದು ಭಾನುವಾರ ಪೊಲೀಸರು ಹೇಳಿದ್ದಾರೆ.
ಶಮಾ ಕೊಲೆಗೀಡಾದ ಮಹಿಳೆ. ಮಹಿಳೆಯ ಪತಿ ಅನಸ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ರತ್ನಪುರಿ ಠಾಣಾಧಿಕಾರಿ ತೇಜ್ ಪ್ರಪಾತ್ ಹೇಳಿದ್ದಾರೆ.
ಮಹಿಳೆಯು ಅನಸ್‌ನನ್ನು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅಂದಿನಿಂದ ಅವರ ಅತ್ತೆ–ಮಾವಂದಿರು ₹5 ಲಕ್ಷ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂದು ಮಹಿಳೆಯ ಸಹೋದರ ದೂರು ನೀಡಿದ್ದಾರೆ.
ಶಮಾ ಅವರ ಕುಟುಂಬದವರು ಅವರಿಗೆ ₹1 ಲಕ್ಷ ನೀಡಿದ್ದರು. ಆದರೂ ಅವರ ಮೇಲೆ ದೌರ್ಜನ್ಯ ಮುಂದುವರೆದಿತ್ತು. ಶನಿವಾರ ಅವರನ್ನು ಹೊಡೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.