ADVERTISEMENT

ಪಂಜಾಬ್‌ನ ಇಬ್ಬರು ಮಾಜಿ ಸಚಿವರ ಮೇಲೆ ಇ.ಡಿ ದಾಳಿ; ಮೊಬೈಲ್, ದಾಖಲೆ ವಶ

ಪಿಟಿಐ
Published 2 ಡಿಸೆಂಬರ್ 2023, 9:30 IST
Last Updated 2 ಡಿಸೆಂಬರ್ 2023, 9:30 IST
<div class="paragraphs"><p>ಜಾರಿ ನಿರ್ದೇಶನಾಲಯ</p></div>

ಜಾರಿ ನಿರ್ದೇಶನಾಲಯ

   

ನವದೆಹಲಿ: ಅರಣ್ಯ ಇಲಾಖೆಯ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಇಬ್ಬರು ಮಾಜಿ ಅರಣ್ಯ ಸಚಿವರು ಮತ್ತು ಇತರರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿರುವ ಜಾರಿ ನಿರ್ದೇಶನಾಲಯ (ಇ.ಡಿ), ದಾಖಲೆಗಳು, ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದೆ.

ಕಾಂಗ್ರೆಸ್ ನಾಯಕರಾದ ಸಾಧು ಸಿಂಗ್ ಧರ್ಮ್‌ಸೋತ್ ಮತ್ತು ಸಂಗತ್ ಸಿಂಗ್ ಗಿಲ್ಜಿಯಾ ವಿರುದ್ಧ ಇ.ಡಿ ಕಾರ್ಯಾಚರಣೆ ನಡೆಸಿದೆ.

ADVERTISEMENT

ರಾಜ್ಯ ಅರಣ್ಯ ಇಲಾಖೆಯಲ್ಲಿ ಮರಗಳನ್ನು ಕಡಿಯಲು ಪರವಾನಿಗೆ ನೀಡುವುದು ಸೇರಿದಂತೆ ಇಲಾಖೆಯಲ್ಲಿ ವರ್ಗಾವಣೆ ಹಾಗೂ ಪೋಸ್ಟಿಂಗ್‌ನಲ್ಲಿ ಲಂಚ ಪಡೆದಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಹೇಳಿದೆ.

ನವೆಂಬರ್ 30ರಂದು ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಧರ್ಮ್‌ಸೋತ್, ಗಿಲ್ಜಿಯಾ ಅವರ ಆಪ್ತರು, ಅರಣ್ಯ ಅಧಿಕಾರಿಗಳು ಮತ್ತು ಕೆಲವು ಖಾಸಗಿ ವ್ಯಕ್ತಿಗಳ ಮನೆ ಮೇಲೂ ಇ.ಡಿ ದಾಳಿ ನಡೆಸಿತ್ತು.

ಐದು ಬಾರಿ ಶಾಸಕ ಧರ್ಮ್‌ಸೋತ್ (63) ಅವರನ್ನು ಈ ವರ್ಷದ ಆರಂಭದಲ್ಲಿ ಅಕ್ರಮ ಅಸ್ತಿ ಪ್ರಕರಣದಲ್ಲಿ ವಿಜಿಲೆನ್ಸ್ ಬಂಧಿಸಿತ್ತು. ಗಿಲ್ಜಿಯಾ ಅವರು ಹೋಶಿಯಾಪುರದ ಶಾಸಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.