ADVERTISEMENT

ಶಿವಸೇನಾ ಶಿಂದೆ ಬಣದಿಂದ ಕಾಂಗ್ರೆಸ್ X MP ಮಿಲಿಂದ್ ದಿಯೋರಾಗೆ ರಾಜ್ಯಸಭೆ ಟಿಕೆಟ್

ಮಿಲಿಂದ್ ದಿಯೋರಾ ಅವರು ಕಳೆದ ತಿಂಗಳಷ್ಟೇ ಕಾಂಗ್ರೆಸ್ ತೊರೆದು ಶಿಂದೆ ನೇತೃತ್ವದ ಶಿವಸೇನಾವನ್ನು ಸೇರಿದ್ದರು.

ಪಿಟಿಐ
Published 14 ಫೆಬ್ರುವರಿ 2024, 12:37 IST
Last Updated 14 ಫೆಬ್ರುವರಿ 2024, 12:37 IST
ಮಿಲಿಂದ್ ದಿಯೋರಾ
ಮಿಲಿಂದ್ ದಿಯೋರಾ   

ಮುಂಬೈ: ಮಹಾರಾಷ್ಟ್ರದಿಂದ ರಾಜ್ಯಸಭೆ ಚುನಾವಣೆಗೆ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ತಮ್ಮ ಪಕ್ಷವಾದ ‘ಶಿವಸೇನಾ ಶಿಂದೆ’ ಬಣದಿಂದ ಅಧಿಕೃತ ಅಭ್ಯರ್ಥಿಯಾಗಿ ಮಾಜಿ ಸಂಸದ ಹಾಗೂ ಮಾಜಿ ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಅವರ ಹೆಸರು ಘೋಸಿಸಿದ್ದಾರೆ.

ಮಿಲಿಂದ್ ದಿಯೋರಾ ಅವರು ಕಳೆದ ತಿಂಗಳಷ್ಟೇ ಕಾಂಗ್ರೆಸ್ ತೊರೆದು ಶಿಂದೆ ನೇತೃತ್ವದ ಶಿವಸೇನಾವನ್ನು ಸೇರಿದ್ದರು.

ಮಿಲಿಂದ್ ದಿಯೋರಾ ಅವರು ಮುಂಬೈನಿಂದ ಎರಡು ಬಾರಿ ಲೋಕಸಭೆಗೆ ಕಾಂಗ್ರೆಸ್ ಸದಸ್ಯರಾಗಿದ್ದರು. ಅವರು ಇದೇ ಮೊದಲ ಬಾರಿಗೆ ಮೇಲ್ಮನೆ ಪ್ರವೇಶ ಮಾಡುತ್ತಿದ್ದಾರೆ.

ADVERTISEMENT

ಮಿಲಿಂದ್ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರೂ ಆಗಿದ್ದರು.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರಸ್ತುತ ಶಿವಸೇನಾ ಶಿಂದೆ ಬಣದ ಸದಸ್ಯರ ಸಂಖ್ಯೆ 39. ಬಿಜೆಪಿ 104. ರಾಜ್ಯಸಭೆ ಸ್ಥಾನ ಗೆಲ್ಲಲು ಕನಿಷ್ಠ 45 ಸದಸ್ಯರ ಮತ ಬೇಕು. ಮಿಲಿಂದ್ ದಿಯೋರಾ ಗೆಲ್ಲಲು ಬಿಜೆಪಿ ಬೆಂಬಲ ಬೇಕಾಗಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.