ADVERTISEMENT

ಚುನಾವಣಾ ಆಯೋಗ ಅಧಿಕಾರದಲ್ಲಿರುವವರ ಗುಲಾಮ: ಉದ್ದವ್‌ ಠಾಕ್ರೆ

ಶಿವಸೇನೆ ಕಿತ್ತುಕೊಳ್ಳಲು ಸಾಧ್ಯವಿಲ್ಲ

ಪಿಟಿಐ
Published 5 ಮಾರ್ಚ್ 2023, 20:12 IST
Last Updated 5 ಮಾರ್ಚ್ 2023, 20:12 IST
ಉದ್ದವ್‌ ಠಾಕ್ರೆ
ಉದ್ದವ್‌ ಠಾಕ್ರೆ   

ಖೇಡ್, ರತ್ನಗಿರಿ: ‘ಬಂಡಾಯ ಬಣಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಹಂಚಿಕೆ ಮಾಡಿದ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ (ಯುಬಿಟಿ) ಮುಖಂಡ ಉದ್ಧವ್ ಠಾಕ್ರೆ, ಆಯೋಗವನ್ನು ಅಧಿಕಾರದಲ್ಲಿರುವ ಜನರ ಗುಲಾಮ’ ಎಂದು ಕರೆದಿದ್ದಾರೆ.

ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗವು ತನ್ನ ತಂದೆ ದಿವಂಗತ ಬಾಳ್ ಠಾಕ್ರೆ ಸ್ಥಾಪಿಸಿದ ಪಕ್ಷವನ್ನು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ರಾಜಕೀಯವಾಗಿ ‘ಅಸ್ಪೃಶ್ಯ’ವಾಗಿದ್ದಾಗ ಅದರೊಂದಿಗೆ ನಿಂತವರು ಬಾಳ್ ಠಾಕ್ರೆ. ನೀವು (ಚುನಾವಣಾ ಆಯೋಗ) ನಮ್ಮಿಂದ ಪಕ್ಷದ ಹೆಸರು ಮತ್ತು ಚಿಹ್ನೆ ಕಸಿದುಕೊಂಡಿದ್ದೀರಿ. ಆದರೆ, ನನ್ನಿಂದ ಶಿವಸೇನೆ ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಉದ್ದವ್ ತಿಳಿಸಿದರು.

ADVERTISEMENT

‘ನಾನು ನಿಮಗೆ ನೀಡಲು ಏನೂ ಇಲ್ಲ. ನಿಮ್ಮ ಆಶೀರ್ವಾದ ಮತ್ತು ಬೆಂಬಲ ಪಡೆಯಲು ಬಂದಿದ್ದೇನೆ’ ಎಂದರು.

ರತ್ನಗಿರಿ ಜಿಲ್ಲೆಯ ಖೇಡ್ ಕ್ಷೇತ್ರವು ಠಾಕ್ರೆ ನಿಷ್ಠ ರಾಮದಾಸ್ ಕದಮ್ ಅವರ ತವರು ಕ್ಷೇತ್ರವಾಗಿದ್ದು, ಅವರು ಶಿಂದೆ ನೇತೃತ್ವದ ಬಣಕ್ಕೆ ನಿಷ್ಠೆ ಬದಲಾಯಿಸಿದ್ದಾರೆ.

ಕಳೆದ ತಿಂಗಳು ಚುನಾವಣಾ ಆಯೋಗವು ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಬಣಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆ ‘ಬಿಲ್ಲು ಬಾಣ’ ಹಂಚಿಕೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.