ನವದೆಹಲಿ: ಐದು ರಾಜ್ಯಗಳ ವಿಧಾನಸಭೆಗೆ ನಡೆಯುವ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಇಂದು (ಅ.9) ಪ್ರಕಟಿಸಿತು.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಚುನಾವಣಾ ಆಯುಕ್ತ ರಾಜೀವ್ ಕುಮಾರ್, ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದರು.
ಛತ್ತೀಸ್‌ಗಢ ಹೊರೆತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಎಲ್ಲಾ ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.
ಮಿಜೋರಾಂ
ಮಿಜೋರಾಂ (40 ಕ್ಷೇತ್ರಗಳು) | |
---|---|
ಚುನಾವಣೆ ಅಧಿಸೂಚನೆ | ಅಕ್ಟೋಬರ್ 13 |
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ | ಅಕ್ಟೋಬರ್ 20 |
ನಾಮಪತ್ರ ಪರಿಶೀಲನೆ | ಅಕ್ಟೋಬರ್ 21 |
ನಾಮಪತ್ರ ಹಿಂಪಡೆಯಲು ಕೊನೆಯ ದಿನ | ಅಕ್ಟೋಬರ್ 23 |
ಮತದಾನದ ದಿನಾಂಕ | ನವೆಂಬರ್ 7 |
ಮತ ಎಣಿಕೆ | ಡಿಸೆಂಬರ್ 03 |
ಮಧ್ಯಪ್ರದೇಶ
ಮಧ್ಯಪ್ರದೇಶ (230 ಕ್ಷೇತ್ರಗಳು) | |
---|---|
ಚುನಾವಣೆ ಅಧಿಸೂಚನೆ | ಅಕ್ಟೋಬರ್ 21 |
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ | ಅಕ್ಟೋಬರ್ 30 |
ನಾಮಪತ್ರ ಪರಿಶೀಲನೆ | ಅಕ್ಟೋಬರ್ 31 |
ನಾಮಪತ್ರ ಹಿಂಪಡೆಯಲು ಕೊನೆಯ ದಿನ | ನವೆಂಬರ್ 02 |
ಮತದಾನದ ದಿನಾಂಕ | ನವೆಂಬರ್ 17 |
ಮತ ಎಣಿಕೆ | ಡಿಸೆಂಬರ್ 03 |
ರಾಜಸ್ಥಾನ
ರಾಜಸ್ಥಾನ (200 ಕ್ಷೇತ್ರಗಳು) | |
---|---|
ಚುನಾವಣೆ ಅಧಿಸೂಚನೆ | ಅಕ್ಟೋಬರ್ 30 |
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ | ನವೆಂಬರ್ 06 |
ನಾಮಪತ್ರ ಪರಿಶೀಲನೆ | ನವೆಂಬರ್ 07 |
ನಾಮಪತ್ರ ಹಿಂಪಡೆಯಲು ಕೊನೆಯ ದಿನ | ನವೆಂಬರ್ 09 |
ಮತದಾನದ ದಿನಾಂಕ | ನವೆಂಬರ್ 23 |
ಮತ ಎಣಿಕೆ | ಡಿಸೆಂಬರ್ 03 |
ತೆಲಂಗಾಣ
ತೆಲಂಗಾಣ (119 ಕ್ಷೇತ್ರಗಳು) | |
---|---|
ಚುನಾವಣೆ ಅಧಿಸೂಚನೆ | ನವೆಂಬರ್ 03 |
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ | ನವೆಂಬರ್ 10 |
ನಾಮಪತ್ರ ಪರಿಶೀಲನೆ | ನವೆಂಬರ್ 13 |
ನಾಮಪತ್ರ ಹಿಂಪಡೆಯಲು ಕೊನೆಯ ದಿನ | ನವೆಂಬರ್ 15 |
ಮತದಾನದ ದಿನಾಂಕ | ನವೆಂಬರ್ 30 |
ಮತ ಎಣಿಕೆ | ಡಿಸೆಂಬರ್ 03 |
ಛತ್ತೀಸಗಢ
ಛತ್ತೀಸ್‌ಗಡ (119 ಕ್ಷೇತ್ರಗಳು) | ||
---|---|---|
ಮೊದಲ ಹಂತ (20 ಕ್ಷೇತ್ರಗಳು | 2ನೇ ಹಂತ (70 ಕ್ಷೇತ್ರಗಳು) | |
ಚುನಾವಣೆ ಅಧಿಸೂಚನೆ | ಅಕ್ಟೋಬರ್ 13 | ಅಕ್ಟೋಬರ್ 21 |
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ | ಅಕ್ಟೋಬರ್ 20 | ಅಕ್ಟೋಬರ್ 30 |
ನಾಮಪತ್ರ ಪರಿಶೀಲನೆ | ಅಕ್ಟೋಬರ್ 21 | ಅಕ್ಟೋಬರ್ 31 |
ನಾಮಪತ್ರ ಹಿಂಪಡೆಯಲು ಕೊನೆಯ ದಿನ | ಅಕ್ಟೋಬರ್ 23 | ನವೆಂಬರ್ 02 |
ಮತದಾನದ ದಿನಾಂಕ | ನವೆಂಬರ್ 07 | ನವೆಂಬರ್ 17 |
ಮತ ಎಣಿಕೆ | ಡಿಸೆಂಬರ್ 03 | ಡಿಸೆಂಬರ್ 03 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.