ADVERTISEMENT

ಆಯೋಗದ ಆದೇಶ ಪ್ರಜಾಪ್ರಭುತ್ವಕ್ಕೆ ಮಾರಕ: ಚಿಹ್ನೆ ಕೈತಪ್ಪಿದ್ದಕ್ಕೆ ಠಾಕ್ರೆ ಆಕ್ರೋಶ

ಪಿಟಿಐ
Published 17 ಫೆಬ್ರುವರಿ 2023, 16:05 IST
Last Updated 17 ಫೆಬ್ರುವರಿ 2023, 16:05 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ    

ಮುಂಬೈ: ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನಾ ಎಂಬ ಚುನಾವಣಾ ಆಯೋಗದ ಆದೇಶವನ್ನು ಮಾಜಿ ಸಿಎಂ ಉದ್ಧವ್‌ ಠಾಕ್ರೆ ಖಂಡಿಸಿದ್ದಾರೆ. ಚುನಾವಣಾ ಆಯೋಗದ ಈ ಆದೇಶವು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಅವರು (ಏಕನಾಥ್ ಶಿಂಧೆ ಬಣ) ನಮ್ಮ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಕದ್ದಿದ್ದಾರೆ. ಆದರೆ ಈ ಕಳ್ಳತನಕ್ಕೆ ಜನರು ಸೇಡು ತೀರಿಸಿಕೊಳ್ಳುತ್ತಾರೆ’ ಎಂದು ಠಾಕ್ರೆ ಅವರು ಬಾಂದ್ರಾದಲ್ಲಿರುವ ತಮ್ಮ ಬಂಗಲೆ ‘ಮಾತೋಶ್ರೀ’ಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. ಸರ್ವಾಧಿಕಾರ ಆರಂಭವಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಬೇಕು’ ಎಂದು ಠಾಕ್ರೆ ಮೂದಲಿಸಿದರು.

ADVERTISEMENT

‘ಏಕನಾಥ್ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಘೋಷಿಸುವ ಚುನಾವಣಾ ಆಯೋಗದ ಆದೇಶವನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ’ ಎಂದು ಅವರು ಹೇಳಿದರು.

ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಗಳನ್ನು ಈ ಅದೇಶ ಸೂಚಿಸುತ್ತಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.