ADVERTISEMENT

ಇವಿಎಂನ ಯಾವುದೇ ಬಟನ್ ಒತ್ತಿದರೂ ಮತ ಬಿಜೆಪಿಗೆ: ಬಿಜೆಪಿ ಶಾಸಕನ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 12:46 IST
Last Updated 21 ಅಕ್ಟೋಬರ್ 2019, 12:46 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ವಿದ್ಯುನ್ಮಾನ ಮತಯಂತ್ರ (ಇವಿಎಂ)ನ ಯಾವುದೇ ಬಟನ್ ಒತ್ತಿದರೂ ಆಡಳಿತರೂಢ ಪಕ್ಷಕ್ಕೆ ಮತ ಹೋಗುತ್ತದೆ ಎಂದು ಹರಿಯಾಣದ ಅಸ್ಸಂಧ್ ಕ್ಷೇತ್ರದ ಶಾಸಕ ಬಕ್ಷೀಶ್ಸಿಂಗ್ ವಿರ್ಕ್ ಹೇಳಿದ್ದರು.ವಿರ್ಕ್ ಅವರ ಈ ಹೇಳಿಕೆಯ ವಿಡಿಯೊ ಟ್ವೀಟಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಯಲ್ಲಿರುವ ಅತ್ಯಂತಪ್ರಾಮಾಣಿಕ ವ್ಯಕ್ತಿ ಇವರೇ ಎಂದು ಹೇಳಿದ್ದಾರೆ.

ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯುತ್ತಿದ್ದು, ಮನೋಹರ್ ಲಾಲ್ ಖಟ್ಟರ್ ಎರಡನೇ ಬಾರಿ ಮುಖ್ಯಮಂತ್ರಿಯಾಗಲು ಸ್ಪರ್ಧಿಸುತ್ತಿದ್ದಾರೆ.

ರಾಹುಲ್ ಗಾಂಧಿ ಶೇರ್ ಮಾಡಿರುವ ಆ ವಿಡಿಯೊ ಫೇಕ್ ಎಂದು ವಿರ್ಕ್ ವಾದಿಸುತ್ತಿದ್ದು, ಬಿಜೆಪಿಯ ಹೆಸರು ಕೆಡಿಸುವುದಕ್ಕಾಗಿ ವಿಪಕ್ಷಗಳು ಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.

ADVERTISEMENT

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಸ್ಸಂಧ್ ಚುನಾವಣಾ ಕ್ಷೇತ್ರದ ವಿಶೇಷ ವೀಕ್ಷಕವಿನೋದ್ ಜಸ್ಟಿ ಮತ್ತು ವಿರ್ಕ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಚುನಾವಣೆಯನ್ನು ಶಾಂತ ರೀತಿಯಲ್ಲಿ ನಡೆಸಲು ಸರಿಯಾದ ಕ್ರಮ ಕೈಗೊಳ್ಳುವಂತೆ ಜಸ್ಟಿ ಅವರಿಗೆ ಹೇಳಲಾಗಿತ್ತು ಎಂದು ಚುನಾವಣಾ ಆಯೋಗಹೇಳಿಕೆ ನೀಡಿದೆ.

ಬಿಜೆಪಿಯನ್ನು ಜನರು ನಿರ್ಲಕ್ಷಿಸುತ್ತಾರೆ ಎಂದು ಅವರಿಗೆ ಗೊತ್ತಿದೆ. ಹಾಗಾಗಿಯೇ ಅವರ ಶಾಸಕರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಯಾಣದಕಾಂಗ್ರೆಸ್ ಮುಖ್ಯಸ್ಥೆ ಕುಮಾರಿ ಸೆಲ್ಜಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.