ನವದಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಟ್ರ್ಯಾಕ್ಟರ್ ರ್‍ಯಾಲಿ ಮೂಲಕ ಪ್ರತಿಭಟನೆಗೆ ಮುಂದಾಗಿರುವ ರೈತರು ಮಂಗಳವಾರ ಬೆಳಿಗ್ಗೆ ದೆಹಲಿ-ಹರಿಯಾಣ ಟಿಕ್ರಿ ಗಡಿಯಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದಿದ್ದಾರೆ.
ಸಿಂಘು ಗಡಿಯಲ್ಲೂ ಇದೇ ರೀತಿಯ ವರದಿಗಳು ಬರುತ್ತಿವೆ, ಇಲ್ಲೂ ಸಹ ರೈತರ ಮತ್ತೊಂದು ಗುಂಪು ಬ್ಯಾರಿಕೇಡ್‌ಗಳನ್ನು ಮುರಿದಿದೆ.
ಈ ಎರಡು ಗಡಿ ಬಿಂದುಗಳಿಂದ ರೈತರು ದೆಹಲಿಯನ್ನು ಪ್ರವೇಶಿಸಿದ್ದಾರೆ. ಎಹಲಿ ಪೊಲೀಸರ ಜೊತೆ ಆಗಿದ್ದ ಒಪ್ಪಂದ ಮುರಿದು ರೈತರು ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿ ಪ್ರವೇಶಿಸಿದ್ದಾರೆ.
ಸೋಮವಾರ, ದೆಹಲಿ ಪೊಲೀಸರು ರೈತರ ಮೆರವಣಿಗೆಗೆ 37 ಷರತ್ತುಗಳನ್ನು ನೀಡಿದ್ದರು. ಸಿಂಗು, ಟಿಕ್ರಿ, ಗಾಜಿಪುರ ಮತ್ತು ಚಿಲ್ಲಾ ನಾಲ್ಕು ಗಡಿಗಳಿಂದ ನಗರ ಪ್ರವೇಶಕ್ಕೆ ನಿಯಮಾವಳಿ ರೂಪಿಸಲಾಗಿತ್ತು.
ಗಣರಾಜ್ಯೋತ್ಸವದ ಪರೇಡ್ ಬಳಿಕ ರೈತರ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆಯೇ ರೈತರು ಮತ್ತು ಪೊಲಿಸರ ನಡುವೆ ತಿಕ್ಕಾಟ ಏರ್ಪಟ್ಟಿದೆ. ಪಂಜಾಬ್ ಹರಿಯಾಣ ಸೇರಿದಂತೆ ಸುತ್ತಮುತ್ತಲ ರಾಜ್ಯಗಳಿಂದ ಲಕ್ಷಾಂತರ ರೈತರು ಟ್ರ್ಯಾಕ್ಟರ್ ಮೂಲಕ ದೆಹಲಿಗೆ ತೆರಳಿದ್ದಾರೆ.
ಗಣರಾಜ್ಯೋತ್ಸವದ ರಾಜ್‌ಪಾತ್‌ನಲ್ಲಿ ಆಹ್ವಾನಿತರು ಜಮಾಯಿಸುತ್ತಿದ್ದಂತೆಯೇ ದೆಹಲಿ ಪೊಲೀಸ್ ವಾಹನಗಳು ಪೂರ್ವನಿರ್ಧರಿತ ಮಾರ್ಗಗಳಿಗೆ ತೆರಳುವಂತ ರೈತರಿಗೆ ಸೂಚನೆ ನೀಡುತ್ತಿರುವುದುದೃಶ್ಯದಲ್ಲಿ ಕಂಡುಬಂದಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.